(blind) ಅಂಧತ್ವ ಶಾಪವಲ್ಲ, ಅದೊಂದು ದಿವ್ಯಶಕ್ತಿ

ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಅಂಧರ (blind)ಟಿ-20 ನಾಗೇಶ ಟ್ರೋಫಿ (ಗ್ರೂಪ್ ಸಿ) ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಉದ್ಘಾಟಿಸಿದರು.
ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಅಂಧರ (blind)ಟಿ-20 ನಾಗೇಶ ಟ್ರೋಫಿ (ಗ್ರೂಪ್ ಸಿ) ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಉದ್ಘಾಟಿಸಿದರು.
Published on
ಹುಬ್ಬಳ್ಳಿ: ಅಂಧತ್ವ (blind) ಎನ್ನುವುದು ಶಾಪವಲ್ಲ, ಅದು ಎಲ್ಲವನ್ನೂ ಮೀರಿ ಬೆಳೆಯುವ ದಿವ್ಯಶಕ್ತಿ ಎಂದು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅಭಿಪ್ರಾಯಪಟ್ಟರು.
ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಇಂಡಸ್‌ಇಂಡ್ ಬ್ಯಾಂಕ್ ಸಹಯೋಗದಲ್ಲಿ ಐದು ದಿನಗಳವರೆಗೆ ಆಯೋಜಿಸಿರುವ ರಾಷ್ಟ್ರ ಮಟ್ಟದ ಅಂಧರ ಟಿ-20 ನಾಗೇಶ ಟ್ರೋಫಿ (ಗ್ರೂಪ್ ಸಿ) ಕ್ರಿಕೆಟ್ ಪಂದ್ಯಾವಳಿಯನ್ನು ಇಲ್ಲಿಯ ಗುಜರಾತ ಭವನದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಅಂಗಾಂಗಗಳು ಸರಿ ಇದ್ದರೂ ಏನೂ ಸಾಧನೆ ಮಾಡದವರು ನಮ್ಮ ಮಧ್ಯೆ ಇದ್ದಾರೆ. ಅಂಥದ್ದರಲ್ಲಿ ಅಂಧರಲ್ಲಿರುವ ಒಳಗಟ್ಟು ಈ ಎಲ್ಲ ಸಾಧನೆಗೆ ಕಾರಣವಾಗಿದೆ. ತಮ್ಮ ಪ್ರತಿಭೆಯನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ. ಅವರಲ್ಲಿ ಅಪಾರ ಜ್ಞಾನ ಮತ್ತು ಬುದ್ಧಿ ಇದೆ ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸಮರ್ಥನಂ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಅಂಧರು ಕೂಡ ತಮ್ಮ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂಧರ ಕ್ರಿಕೆಟ್ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ, ಸನ್ಮಾನಿಸಿದ್ದಾರೆ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆ ಸಂಸ್ಥಾಪಕ ಡಾ. ಮಹಾಂತೇಶ ಕಿವುಡಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಂಭಾವಿ ಆರ್ಕಿಟೆಕ್ಚರ್ ಫೌಂಡೇಷನ್‌ನ ನಳಿನಿ ಕೆಂಭಾವಿ, ಗ್ಲೋಬಲ್ ಎಂಬಿಎ ಕಾಲೇಜ್ ನಿರ್ದೇಶಕ ಡಾ. ಸುಮನ್ ಕುಮಾರ, ಡಾ. ಸುನೀಲ ಗೋಖಲೆ, ಹೋಟೆಲ್ ಉದ್ಯಮಿಗಳಾದ ವೆಂಕಟೇಶ ಬುಡಗಬೆಟ್ಟು, ವಿಶ್ವನಾಥ ಹಿರೇಕರ, ಡಾ. ಆರ್.ಬಿ. ಮುಗುದಂ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net