ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ವತಿರ್ಸುತ್ತಿದೆ. ಹತಾಶ ಮನೋಭಾವದಿಂದ ಇಂತಹ ಅಪ್ರಜಾಸತ್ತಾತ್ಮಕ ಹಾಗೂ ಪುಂಡಾಟಿಕೆಯ ಹಾದಿ ಹಿಡಿದಿದೆ. ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ನಿವಾಸದ ಬಳಿ ಅಶಾಂತಿ ನಿಮಿರ್ಸಲು ಯತ್ನಿಸಿರುವುದು ಅವರ ಕೀಳು ಮಟ್ಟದ ರಾಜಕಾರಣ ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.