ಬಯೋಗ್ಯಾಸ್ ಶಿವಳ್ಳಿಯಲ್ಲಿ ಬೇಡ biogas

biogas ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಸಚಿವ ಪ್ರಲ್ಹಾದ ಜೋಶಿ ಪತ್ರ
biogas ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಸಚಿವ ಪ್ರಲ್ಹಾದ ಜೋಶಿ ಪತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ
  • ಬಯೋ ಗ್ಯಾಸ್ ಪ್ಲಾಂಟ್ ಅನ್ನು ಸಮೀಪದ ಪಾಲಿಕೆ ಜಾಗದಲ್ಲೇ ಆರಂಭಿಸಿ
  • ನಿತ್ಯ ಹಸಿ ತ್ಯಾಜ್ಯ ಸಾಗಣೆ ಸವಾಲಾಗಿ ಪರಿಣಮಿಸುತ್ತದೆ.
ಈ ಕುರಿತು ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಸಚಿವ ಪ್ರಲ್ಹಾದ ಜೋಶಿ ಪತ್ರ ಬರೆದಿದ್ದು, ಇಬ್ಬರೊಂದಿಗೆ ಖುದ್ದಾಗಿ ಚರ್ಚೆ ಸಹ ನಡೆಸಿದ್ದಾರೆ.
ಈಗಿನ ಸ್ಥಳ ಮಹಾನಗರದಿಂದ ಬಹು ದೂರವಿದ್ದು, ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದೆ. ಹಾಗಾಗಿ, ಈ ಪ್ರಸ್ತಾವಿತ ಬಯೋ ಗ್ಯಾಸ್ ಪ್ಲಾಂಟ್ ಅನ್ನು ಸಮೀಪದ ಪಾಲಿಕೆ ಜಾಗದಲ್ಲೇ ಆರಂಭಿಸಿ ಎಂದು ಸಚಿವ ಜೋಶಿ ನಿರ್ದೇಶನ ನೀಡಿದ್ದಾರೆ.
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಸರ್ವೆ ನಂ.468ರಲ್ಲಿ ಪ್ರಸ್ತಾಪಿತ ಬಯೋಗ್ಯಾಸ್ ಪ್ಲಾಂಟ್ ಅನ್ನು ಸ್ಥಳಾಂತರಿಸುವಂತೆ ಸುತ್ತಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಶಿವಳ್ಳಿಯಲ್ಲಿ ನಿರ್ವಿುಸುವುದರಿಂದ ಅನೇಕ ಸಮಸ್ಯೆ, ಸವಾಲುಗಳು ಎದುರಾಗಲಿವೆ. ಹಾಗಾಗಿ, ಶಿವಳ್ಳಿ ಬದಲು ಪಾಲಿಕೆ ಒಡೆತನದ ಸಮೀಪದ ಜಾಗೆಯಲ್ಲಿ ನಿರ್ವಿುಸುವಂತೆ ಸಲಹೆ ನೀಡಿದ್ದಾರೆ.
ಈಗಿನ ಸ್ಥಳ ಮಹಾನಗರದಿಂದ ಬಹಳ ದೂರವಿರುವುದರಿಂದ ಪಾಲಿಕೆಗೆ ಬಯೋ ಗ್ಯಾಸ್ ಪ್ಲಾಂಟ್ ನಿರ್ವಹಣೆ ಹೊರೆಯಾಗಲಿದೆ. ಶಿವಳ್ಳಿ, ಹೆಬ್ಬಳ್ಳಿ, ಮಾರಡಗಿ, ಸೋಮಾಪುರ ಮತ್ತು ಸುಳ್ಳ ಗ್ರಾಮಸ್ಥರೂ ಶಿವಳ್ಳಿಯಲ್ಲಿ ಬೇಡ, ಸ್ಥಳಾಂತರಿಸಿ ಎಂದು ಮನವಿ ಮಾಡಿದ್ದಾರೆ.

ತರುವಾಯ ಸಮೀಪದ ಪಾಲಿಕೆ ಒಡೆತನದ ಜಾಗದಲ್ಲಿ ನಿರ್ವಿುಸಿ ಎಂದಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ದೂರದ ಗ್ರಾಮದಲ್ಲಿ ಬಯೋ ಗ್ಯಾಸ್ ಪ್ಲಾಂಟ್ ಸ್ಥಾಪಿಸಿದರೆ ನಿತ್ಯ ಹಸಿ ತ್ಯಾಜ್ಯ ಸಾಗಣೆ ಸವಾಲಾಗಿ ಪರಿಣಮಿಸುತ್ತದೆ. ಇದರಿಂದ ಪಾಲಿಕೆಗೆ ಹೆಚ್ಚಿನ ವೆಚ್ಚವಾಗುತ್ತದೆ, ನಿರ್ವಹಣೆಗೂ ತೊಡಕಾಗುತ್ತದೆ.

ತ್ಯಾಜ್ಯ ಸಾಗಣೆಯಿಂದ ಸಾರ್ವಜನಿಕರಿಗೂ ಕಿರಿ ಕಿರಿ, ಅನಾನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಯೋ ಗ್ಯಾಸ್ ಘಟಕ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸಬೇಕಿದ್ದು, ತ್ಯಾಜ್ಯವನ್ನು ಹತ್ತಿರದಲ್ಲೇ ಸಂಸ್ಕರಿಸಿ ಗ್ಯಾಸ್ ತಯಾರಿಸುವುದು ಅಗತ್ಯ.

ಈ ಹಿನ್ನೆಲೆಯಲ್ಲಿ, ಘಟಕವನ್ನು ಪಾಲಿಕೆ ಒಡೆತನದ ಸಮೀಪದ ಜಾಗೆಯಲ್ಲಿ ಪ್ರಾರಂಭಿಸುವಂತೆ ಮೇಯರ್ ಮತ್ತು ಆಯುಕ್ತರನ್ನು ಒತ್ತಾಯಿಸಿದ್ದು, ಇಬ್ಬರೂ ಇದಕ್ಕೆ ಸಮ್ಮತಿಸಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net