bhavarasara ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಹುಬ್ಬಳ್ಳಿಯ ತಿಮ್ಮಸಾಗರ ಗುಡಿಯ ಹಿಂಭಾಗದ bhavarasara ಭಾವಸಾರ ಭವನದಲ್ಲಿ ತಜ್ಞ ವೈದ್ಯರಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಹುಬ್ಬಳ್ಳಿಯ ತಿಮ್ಮಸಾಗರ ಗುಡಿಯ ಹಿಂಭಾಗದ bhavarasara ಭಾವಸಾರ ಭವನದಲ್ಲಿ ತಜ್ಞ ವೈದ್ಯರಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
Published on
ಹುಬ್ಬಳ್ಳಿ: ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಕ್ಲಬ್ ವತಿಯಿಂದ ಇಲ್ಲಿಯ ವಿದ್ಯಾನಗರದ ತಿಮ್ಮಸಾಗರ ಗುಡಿಯ ಹಿಂಭಾಗದ ಭಾವಸಾರ bhavarasara ಭವನದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕ ಸಮಾಜ ಭೂಷಣ ನಾರಾಯಣರಾವ್ ಬಿ. ತಾತುಸ್ಕರ ಉದ್ಘಾಟಿಸಿ ಮಾತನಾಡಿ, 40 ವಯಸ್ಸು ದಾಟಿದ ಪ್ರತಿಯೊಬ್ಬರೂ ನಿಯಮಿತವಾಗಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರೂ ತಪ್ಪದೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.
ಡಾ. ಅಭಿಷೇಕ ಗುಮಾಸ್ತೆ, ಡಾ. ಲಕ್ಷ್ಮೀ ಬಿ.ಆರ್. ಗುಮಾಸ್ತೆ, ಡಾ. ಗಣೇಶ ಪೂಜಾರ ಸೇರಿದಂತೆ ವೈದ್ಯರ ತಂಡದಿಂದ ಉಚಿತವಾಗಿ ಆರೋಗ್ಯ ತಪಾಸಣೆ, ಸಮಾಲೋಚನೆ ನಡೆಯಿತು. ಸುಮಾರು 100 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಇದೇ ವೇಳೆ ವೈದ್ಯರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ದಯಾನಂದ ಅಂಬರಕರ, ಕಾರ್ಯದರ್ಶಿ ಅನಂತ ಸರ್ವದೆ, ಸಂಸ್ಥೆಯ ಮಹಿಳಾ ಕಲ್ಯಾಣ ನಿರ್ದೇಶಕಿ ಲಕ್ಷ್ಮೀತಾಯಿ ತೇಲ್ಕರ, ಮಕ್ಕಳ ಕಲ್ಯಾಣ ನಿರ್ದೇಶಕಿ ಅನಿತಾ ಮುಸಳೆ, ಸಂಸ್ಥೆಯ ಹಿರಿಯ ಸದಸ್ಯರಾದ ಕೆ.ಜಿ. ಟಿಕಾರೆ, ಪ್ರಕಾಶ ತಿರುಮಲೆ, ಸೀಮಾ ದೈಪುಲೆ, ದೀಪಕ ಮಾತಾಡೇ, ಪ್ರಕಾಶ ಬೆಳಂಕರ, ವಿಜಯ ಕುಮಾರ ಲಾಂಡೆ, ಡಾ. ಸುರೇಶ ಕಪಟಕರ, ಕುಶಾಲ ಬೇದರೆ, ಗಣೇಶ ಮುಸಳೆ, ಅಶೋಕ ಮಹೀಂದ್ರಕರ, ಅನಂತ ಸುಲಾಖೆ, ಜಗದೀಶ ಹಂಚಾಟೆ, ಶಶಿಕಾಂತ ಗುಜ್ಜರ, ರಾಮಚಂದ್ರ ಬೇಂದ್ರೆ, ವೃಷಾಲಿ ಹಂಚಾಟೆ, ಅರ್ಚನಾ ಅಂಬರಕರ, ಹೇಮಾ ಸರ್ವದೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net