ಬ್ಯಾಗ್‌ನಲ್ಲಿ ಬಟ್ಟೆಗಳ ಜತೆಗೆ ಅಂದಾಜು ಎಂಟು ತೊಲ ಬಂಗಾರದ ಆಭರಣಗಳಿದ್ದವು. ಬ್ಯಾಗ್ ಕಳೆದಿರುವ ಕುರಿತ ಮಾಹಿತಿಯನ್ನು ಪೊಲೀಸರ ವಾಟ್ಸ್ ಆ್ಯಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿತ್ತು. ಮಾಹಿತಿ ಗಮನಿಸಿದ ಆಟೋ ಚಾಲಕ, ತೆಂಗಿನಗುಂಡಿ ನಿವಾಸಿ ಮೋಹನ ತಿಮ್ಮಪ್ಪ ನಾಯ್ಕ, ತಕ್ಷಣ ತಮ್ಮ ಆಟೋ ಪರಿಶೀಲಿಸಿದಾಗ ಬ್ಯಾಗ್ ಪತ್ತೆಯಾಗಿದೆ. ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಬ್ಯಾಗ್ ಅನ್ನು ಹಸ್ತಾಂತರಿಸಿದರು. ಎಎಸ್‌ಐ ಮಂಜುನಾಥ ಗೌಡರ ಅವರ ಮೂಲಕ ಬ್ಯಾಗ್ ಅನ್ನು ಅದರ ಮಾಲಕಿ ಸವಿತಾ ಮಹಾಬಲೇಶ್ವರ ಅಂಬಿಗ ಅವರಿಗೆ ವಾಪಸ್ ನೀಡಿದರು. ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಮೋಹನ ತಿಮ್ಮಪ್ಪ ನಾಯ್ಕ ಅವರ ಕಾರ್ಯಕ್ಕೆ ಪೊಲೀಸರು ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.