ಬಿ.ಕೆ. ಡಾ. ಬಸವರಾಜ ರಾಜಋಷಿ ಪ್ರಾಸ್ತಾವಿಕ ಮಾತನಾಡಿ, ಇಂದಿನ ಭೌತಿಕ ವಿಜ್ಞಾನವನ್ನು ಶಾಲೆ, ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಕಲಿಸಲಾಗುತ್ತಿದೆ. ಚಾರ್ಲಸ್ ಡಾರ್ವಿನ್ ರ ಜೀವ ವಿಕಾಸವಾದ, ಆಧುನಿಕ ಮನಃಶಾಸ್ತ್ರ, ಮಾನವ ವಿಜ್ಞಾನ ಶಾಸ್ತ್ರ ಮುಂತಾದ ಶಿಕ್ಷಣದಲ್ಲಿ ಆತ್ಮದ ಅಸ್ತಿತ್ವವನ್ನು ತಿರಸ್ಕರಿಸಿದ ಶಿಕ್ಷಣ ನೀಡಲಾಗುತ್ತದೆ. ಆದ್ದರಿಂದ ಮಾನವನ ಜೀವನಕ್ಕೆ ಅಗತ್ಯವಿರುವ ನೈತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು ಇಲ್ಲವಾಗಿವೆ. ವಿದ್ಯಾರ್ಥಿ ಜೀವನದಲ್ಲಿ ಭಗವದ್ಗೀತೆ ಬೋಧಿಸುವ ಅಧ್ಯಾತ್ಮ ಜ್ಞಾನ, ಯೋಗ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.