ಉತ್ತರ ಪ್ರದೇಶ ಮೂಲದ ಸಲೂನ್ ಅಂಗಡಿ ನಡೆಸುತ್ತಿದ್ದ ಫಾರೂಕ್ ಜಮೀಲ್ ಅಹ್ಮದ್ ಚಪ್ಪಲಿ ಏಟು ತಿಂದವನು. ಮಹಿಳೆಯ ಹಿಂದೆ-ಮುಂದೆ ಓಡಾಡುವುದಲ್ಲದೇ, ಬೈಕ್ ಮನೆಯ ಮುಂದೆ ನಿಲ್ಲಿಸುತ್ತಿದ್ದ. ಮಕ್ಕಳು ಕರಾಟೆ ಕ್ಲಾಸ್‌ಗೆ ಹೋದಾಗ ಹಿಂಬಾಲಿಸಿದ್ದ. ಮನೆಯೊಳಗೆ ಇಣುಕಿ ನೋಡುತ್ತಿದ್ದ. ಇದರಿಂದ ರೋಸಿಹೋಗಿದ್ದ ಮಹಿಳೆಯು, ಮಕ್ಕಳನ್ನು ಕರಾಟೆ ಕ್ಲಾಸ್‌ನಿಂದ ಮನೆಗೆ ಕರೆತಂದಾಗ ಫಾರೂಕ್ ಮಹಿಳೆಯ ಮನೆಯ ಹತ್ತಿರ ಬಂದು ‘ತುಮ್ಹಾರ ಫೋನ್ ನಂಬರ್ ದೇವೋ’ ಎಂದು ಮೈಮೇಲೆ ಬೀಳಲು ಯತ್ನಿಸಿದ್ದ. ಇದರಿಂದ ಕುಪಿತಗೊಂಡ ಮಹಿಳೆ, ಯುವಕನಿಗೆ ಗೂಸಾ ಕೊಟ್ಟಿದ್ದಾರೆ. ಸ್ಥಳೀಯರು ಫಾರೂಕ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.