ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಡಿ. ಹಿರೇಮಠ ಆಯ್ಕೆ High court
B.D.Hiremath
Published on:
Copied
Follow Us
ಧಾರವಾಡ: ತೀವ್ರ ಪೈಪೋಟಿ ಏರ್ಪಟ್ಟಿದ್ದ ಹೈಕೋರ್ಟ್ ವಕೀಲರ ಸಂಘದ ಚುನಾವಣೆ ಶುಕ್ರವಾರ ನಡೆದು
ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಹಾಗೂ ಹೈಕೋರ್ಟ್ ಸ್ಥಾಪನೆಯ ಹೋರಾಟದಲ್ಲಿ ಮುಂಚೂಣಿ ವಹಿಸಿದ್ದ ಬಿ.ಡಿ. ಹಿರೇಮಠ ಚುನಾಯಿತರಾದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಡಿ. ಹಿರೇಮಠ (281) ಮತ ಪಡೆದರೆ ಪ್ರತಿಸ್ಪರ್ಧಿ ಎಸ್.ಬಿ. ಹೆಬ್ಬಳ್ಳಿ (190) ಮತ ಗಳಿಸಿ ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಎ. ನಿಲೋಪಂತ್ 207 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಎ.ಎಂ. ಮಾಲೀಪಾಟೀಲ ಪ್ರಧಾನ ಕಾರ್ಯದರ್ಶಿ (370 ಮತ), ಜಂಟಿ ಕಾರ್ಯದರ್ಶಿಯಾಗಿ ಆರ್.ಪಿ. ಘೋರ್ಪಡೆ,,
ಅದರಂತೆ ಖಜಾಂಚಿಯಾಗಿ ಧಾನವಿ ಜೋಸ್ನಾ ಆಯ್ಕೆಯಾಗಿದರು.
ಕಾರ್ಯಕಾರಿ ಸಮಿತಿಗೆ ಆಕರ್ಷ ಮಿಟ್ಡಲಕೋಡ, ಅಶೋಕ ಅಂಗಡಿ, ಅಭಿನಂದನ ಹಿರೇಮಠ, ಕುಶಾಲ ಕಾಂಬ್ಳೆ ಆಯ್ಕೆಯಾದರು.
ಚುನಾವಣಾಧಿಕಾರಿಗಳಾಗಿ ಎಸ್.ಕೆ. ಕಾಯಕಮಠ,, ಸಹಾಯಕ ಚುನಾವಣಾಧಿಕಾರಿಯಾಗಿ ಆರ್.ಎಚ್. ಅಂಗಡಿ ಕಾರ್ಯನಿರ್ವಹಿಸಿದರು.