ಬಸವರಾಜ ಸಾಧನೆ ಇಂಡಿಯಾ ಬುಕ್​ ಆಫ್​ ರೆಕಾಡ್ಸ್​ನಲ್ಲಿ ದಾಖಲು

ಬಸವರಾಜ್ ಗೆ ಸನ್ಮಾನ
ಬಸವರಾಜ್ ಗೆ ಸನ್ಮಾನ
Published on
ಧಾರವಾಡ: ಹರಿಯಾಣದ ಫರೀದಾಬಾದ್​ನಲ್ಲಿ ಜರುಗಿದ ರೋಪ್​ ಸ್ಕಿಪ್​ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ವಿದ್ಯಾರ್ಥಿ ಬಸವರಾಜ ರುದ್ರಪ್ಪ ಹಜೇರಿ ಸಾಧನೆ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ. 2025ರಲ್ಲಿ ಸುಜಲ್​ ಗುಪ್ತಾ ಹೆಸರಲ್ಲಿದ್ದ 5 ನಿಮಿಷದಲ್ಲಿ 990 ಸ್ಕಿಪ್ಸ್​ ದಾಖಲೆ ಮುರಿದ ಬಸವರಾಜ ಹಜೇರಿ, 1,013 ಸ್ಕಿಪ್ಸ್​ ಮಾಡಿ ದಾಖಲೆ ನಿಮಿರ್ಸಿದ್ದಾನೆ. ಸಾಧಕ ವಿದ್ಯಾರ್ಥಿಗೆ ಅವನ ತಂದೆ ರುದ್ರಪ್ಪ ಹಜೇರಿ ಹಾಗೂ ಮಾವ ಶತ್ರುಘ್ನ ಸಣ್ಣಮ್ಮನವರ ತರಬೇತಿ ನೀಡಿದ್ದರು.
ಸಾಧಕ ವಿದ್ಯಾರ್ಥಿಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಆರ್​. ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಮನೋಜ ಹಂಚಿನಮನಿ, ಪ್ರಾಚಾರ್ಯ ರಾಜು ಕಡೆಮನಿ, ಆಡಳಿತಾಧಿಕಾರಿ ಸತೀಶ ಮಾಸೂರನಾಯಿಕ, ದೈಹಿಕ ಶಿಕ್ಷಣ ಶಿಕ್ಷಕ ಅರುಣ ಎಲಿಗಾರ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net