ರಂಗಪ್ರೋತ್ಸಾಹಕ ಕಾಡಯ್ಯ ಹಿರೇಮಠ ಅವರ ಸ್ಮರಣಾರ್ಥ ಕೊಡಮಾಡುವ ರಂಗಜೀವಿ ಪ್ರಶಸ್ತಿ.
ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜೀವಿ ಕಲಾಬಳಗದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಗತಿಪರ ರೈತ ಬಸಯ್ಯ ಹಿರೇಮಠ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಎಂ. ಜಿ. ಹಿರೇಮಠ, ಜೀವಿ ಕಲಾಬಳಗದೊಂದಿಗೆ ತಮ್ಮ ಸಂಪರ್ಕವನ್ನು ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಲಿಂಗರಾಜನಗರ ಸಮುದಾಯ ಭವನದ ಅಧ್ಯಕ್ಷ ಡಾ. ಜಿ. ಬಿ. ಕಲಕೋಟಿ, ಜೀವಿ ಕಲಾಬಳಗದ ಸಾಂಸ್ಕೃತಿಕ ಲೋಕದ ಸಾಧನೆ ಕೊಂಡಾಡಿದರು.
ಜೀವಿ ಚಿತ್ರಾಲಯದಿಂದ ತಯಾರಿಸಿದ ಎಸ್ಎಸ್ಎಲ್ಸಿ ಸಿನಿಮಾದ ಪೋಸ್ಟರ್ ಅನ್ನು ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಲೋಕಾರ್ಪಣೆಗೊಳಿಸಿದರು.
ಸಿನಿಮಾ ನಿರ್ದೇಶಕ ಡಿ. ವೈಭವ ಹಾಗೂ ಕಲಾವಿದರು, ಡಾ. ವಿಷ್ಣು ಸೇನಾ ಸಮಿತಿಯ ಧಾರವಾಡ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ, ಹುಬ್ಬಳ್ಳಿಯ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಡಾ. ಎಚ್. ವಿ. ಬೆಳಗಲಿ, ಪೊಲೀಸ್ ಇನ್ಸ್ಪೆಕ್ಟರ್ ಜೊ್ಯೕತಿರ್ಲಿಂಗ ಹೊನಕಟ್ಟಿ, ಪ್ರಗತಿಪರ ರೈತ ಬಸವರಾಜ ಸುಳ್ಳದ ಅತಿಥಿಗಳಾಗಿದ್ದರು.
ಪ್ರಸಕ್ತ ಸಾಲಿನ ನಾಟಕ ಅಕಾಡೆಮಿ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಜೊ್ಯೕತಿರ್ಲಿಂಗ ಹೊನಕಟ್ಟಿ, ಪ್ರಕಾಶ ಮಲ್ಲಿಗವಾಡ, ಭೀಮು ಖಟಾವಿ, ಗೋಪಾಲ ಉಣಕಲ್ಲ ಅವರನ್ನು ಸನ್ಮಾನಿಸಲಾಯಿತು.
ಆರ್. ಎಂ. ಹಿರೇಮಠ, ಸಿ.ಎಸ್. ಪಾಟೀಲ ಕಲುಕರ್ಣಿ, ಮಂಜುನಾಥಗೌಡ ಪಾಟೀಲ, ಮಾರುತಿ ಜಾಧವ, ವಿ.ಜಿ. ಪಾಟೀಲ, ಚೆನ್ನಯ್ಯ ಚೌಕಿಮಠ, ಡಾ. ಎಚ್.ಎಚ್. ನದಾಫ, ಶಿವಾನಂದ ಬೆಂಗೇರಿ, ರವಿ ಬೆಣಚಿನಮರಡಿ, ಈರಣ್ಣ ಕರೀಕಟ್ಟಿ, ಸುನೀಲ ಪತ್ರಿ, ಇತರರು ಉಪಸ್ಥಿತರಿದ್ದರು.
ಗದಿಗೆಯ್ಯ ಹಿರೇಮಠ ಸ್ವಾಗತಿಸಿದರು. ಪ್ರೊ. ಶಿವಪ್ರಕಾಶ ಬಳಿಗಾರ ನಿರೂಪಿಸಿದರು.