basav peeth ಮನ ಮನೆಗೂ ಶರಣರ ವಚನಗಳ ಸಾರ

basav peeth ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ "ವಚನಾಮೃತ- 250ರ ಸಂಭ್ರಮ' ಕಾರ್ಯಕ್ರಮವನ್ನು ಪ್ರೊ. ಎ.ಎಂ. ಖಾನ್​ ಉದ್ಘಾಟಿಸಿದರು. ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರೊ. ಕೆ.ಬಿ. ಗುಡಸಿ, ಪ್ರೊ. ವೀರಣ್ಣ ರಾಜೂರ, ಡಾ. ಸಿ.ಎಂ. ಕುಂದಗೋಳ, ಇತರರು ಇದ್ದರು.
basav peeth ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ "ವಚನಾಮೃತ- 250ರ ಸಂಭ್ರಮ' ಕಾರ್ಯಕ್ರಮವನ್ನು ಪ್ರೊ. ಎ.ಎಂ. ಖಾನ್​ ಉದ್ಘಾಟಿಸಿದರು. ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರೊ. ಕೆ.ಬಿ. ಗುಡಸಿ, ಪ್ರೊ. ವೀರಣ್ಣ ರಾಜೂರ, ಡಾ. ಸಿ.ಎಂ. ಕುಂದಗೋಳ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಚನಾಮೃತ 250ರ ಸಂಭ್ರಮ ಉದ್ಘಾಟನೆ
  • ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯ
ಹುಬ್ಬಳ್ಳಿ: basav peeth ಶರಣರ ವಚನಗಳ ಆಧಾರಿತ ವಚನಾಮೃತ ಕಾರ್ಯಕ್ರಮದ ಮೂಲಕ ಪ್ರತಿ ಮನೆ-ಮನಗಳಿಗೂ ಸುಲಭವಾಗಿ ವಚನಗಳ ಸಾರ ತಲುಪಿಸುವಲ್ಲಿ ಬಸವ ಪೀಠ ಮತ್ತು ಆಕಾಶವಾಣಿಯ ಪಾತ್ರ ಬಹಳಷ್ಟಿದೆ ಎಂದು ಚಿತ್ರದುರ್ಗದ ಶ್ರೀಮುರುಗರಾಜೇಂದ್ರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯ ಶ್ರೀ ಬಸವೇಶ್ವರ ಪೀಠ, ಆಕಾಶವಾಣಿ ಧಾರವಾಡ ಹಾಗೂ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಠ ಇವರ ಸಹಯೋಗದಲ್ಲಿ ನಗರದ ಮೂಜಗಂ ಸಭಾಭವನದಲ್ಲಿ ಆಯೋಜಿಸಿದ್ದ "ವಚನಾಮೃತ- 250ರ ಸಂಭ್ರಮ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣವರು ಪ್ರತಿಪಾದಿಸಿದ ಚಿಂತನೆಗಳು ಎಲ್ಲ ಕಾಲಕ್ಕೂ ಅನ್ವಯಿಸಿಕೊಳ್ಳಬಹುದಾದ ಸಾರ್ವಕಾಲಿಕ ಸತ್ಯವಾಗಿವೆ. ಅಧಿಕಾರ ಎಂಬುದು ಸರ್ವರನ್ನೂ ಸಮಾನತೆ ಹಾದಿಯಲ್ಲಿ ಕರೆತರುವ ಗುರುತರವಾದ ಜವಾಬ್ದಾರಿಯಾಗಿದೆ ಎನ್ನುವುದನ್ನು ಬಸವಣ್ಣನವರು ಕಲಿಸಿಕೊಟ್ಟಿದ್ದಾರೆ ಎಂದರು.
ಧಾರವಾಡದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್​ ಅಧ್ಯಕ್ಷ ಪ್ರೊ. ವೀರಣ್ಣ ರಾಜೂರ ಮಾತನಾಡಿ, ವಚನಗಳು ಅನುಭವದ ನುಡಿಗಳಾಗಿರುವುದರಿಂದ ಅವುಗಳಲ್ಲಿ ಮನುಷ್ಯನ ಬದುಕಿನ ಎಲ್ಲ ಬಗೆಯ ಸಮಸ್ಯೆಗಳಿಗೂ ಪರಿಹಾರ ಅಡಗಿದೆ. ದಾಸೋಹ ಚಿಂತನೆಯು ಶರಣ ಧರ್ಮದ ಪ್ರಧಾನ ಮಾರ್ಗವಾಗಿದೆ. ಜ್ಞಾನ ಸಂಪತ್ತು ಸಮಾಜದಿಂದ ಸಮಾಜಕ್ಕೆ ಬಳಕೆಯಾದಾಗ ಮಾತ್ರ ಪರಿಪೂರ್ಣ ಬದುಕು ಸಾಧ್ಯವಾಗುತ್ತದೆ ಎಂಬುದನ್ನು ಶಿವಶರಣರು ಕಲಿಸಿಕೊಟ್ಟಿದ್ದಾರೆ ಎಂದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಡಾ. ಸಿ.ಎಂ. ಕುಂದಗೋಳ ಮಾತನಾಡಿ, ವಚನಾಮೃತ ಕಾರ್ಯಕ್ರಮವು ಸಾಹಿತ್ಯ, ಸಂಗೀತ, ಅನುಭವ ಇವೆಲ್ಲವನ್ನೂ ಹೂರಣದ ರೂಪದಲ್ಲಿ ಉಣಬಡಿಸುವ ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮವಾಗಿದೆ. ಇಂದಿನ ಯುವಜನತೆ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದಾರೆ. ಅವುಗಳ ಮೂಲಕವೇ ಅವರಿಗೆ ಶಿವಶರಣರ ಚಿಂತನೆಗಳು ಸುಲಭವಾಗಿ ಕಲಿಯುವಂತೆ ಮಾಡಿರುವ ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಕವಿವಿ ಪ್ರಭಾರ ಕುಲಸಚಿವ ಪ್ರೊ. ರಾಮಾಂಜಯನೇಯಲು, ಆಕಾಶವಾಣಿ ಮುಖ್ಯಸ್ಥರಾದ ಮಂಜುಳಾ ಪುರಾಣಿಕ, ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ, ಕವಿವಿ ಸಿಂಡಿಕೇಟ್​ ಸದಸ್ಯರಾದ ಶ್ಯಾಮ ಮಲ್ಲನಗೌಡ, ಮಹೇಶ ಹುಲ್ಲಣ್ಣವರ, ದಾಸೋಹಿಗಳಾದ  ವಿಜಯಕುಮಾರ ಕಮ್ಮಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್​, ಬಸವೇಶ್ವರ ಪೀಠವು ತುಂಬಾ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವೇಶ್ವರ ಪೀಠದ ಸಂಯೋಜಕ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವರಾಜ ಲಿಂಗಶೆಟ್ಟರ, ಜಿ.ಬಿ. ಹಳ್ಯಾಳ, ಡಾ. ಸಿಸಿಲಿಯಾ ಡಿಕ್ರೂಜ್​, ಶೈಲಜಾ ರಾಜಕುಮಾರ,  ಬಸವಪೀಠದ ಸಲಹಾ ಸಮಿತಿ ಸದಸ್ಯರಾದ ಶಂಕರ ಕೋಳಿವಾಡ, ಶಂಕರ ಕುಂಬಿ, ಸವಿತಾ ಅಮರಶೆಟ್ಟಿ, ಮೂರು ಸಾವಿರ ಮಠದ ಆಡಳಿತಾಧಿಕಾರಿ ಎ.ಬಿ. ಪಾಟೀಲ, ಬಿ.ಎಂ. ಸಾಲಿಮಠ, ಕೆ.ಎಂ. ಅಂಗಡಿ, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಡಾ. ಜ್ಯೋತಿ ಲಕ್ಷ್ಮಿ ಮತ್ತು ಡಾ. ಶಿವಲೀಲಾ ವೈಜನಾಥ ಪ್ರಾರ್ಥಿಸಿದರು.  ಡಾ. ಈರಣ್ಣ ಹಾಗೂ ಡಾ. ಸುಪ್ರಿಯಾ ಮಲಶೆಟ್ಟಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net