ಒಂದು ವಾರದಲ್ಲಿ ದಿನಾಂಕ ನಿಗದಿಪಡಿಸಲಾಗುವುದು. ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರಿದ್ದಾರೆ. ಅವರಿಗೆ ಯಾವನೋ ಒಬ್ಬ ಕರೆ ಮಾಡಿ, ನಾನು ಲವ್ ಜಿಹಾದ್ ಮಾಡೀನಿ ಎನ್ನುತ್ತಾನೆ. ಜಾಮೀನು ಪಡೆಯುತ್ತಾನೆ. ಪೊಲೀಸರು ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಅವರಿಗೆ ಲವ್ ಜಿಹಾದ್ ಆಗಲಿ, ಭಾರತ ಹಾಳಾಗಲಿ, ಅವರಿಗೆ ಸಂಬಂಧ ಬೀಳುವುದಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮ ಸರ್ಕಾರ ಬಂದಾಗ ನೀವು (ಪೊಲೀಸರು) ಎಲ್ಲಿಗೆ ಹೋಗುತ್ತೀರಿ? ಕರ್ನಾಟಕದಲ್ಲಿಯೇ ಇರಬೇಕು. ಧರ್ಮ, ದೇಶದ ಅಭಿಮಾನ ನೀವು ಇಟ್ಟುಕೊಳ್ಳಬೇಕು ಎಂದು ಚಾಟಿ ಬೀಸಿದರು.