(basanagouda yatnal) 2028ಕ್ಕೆ ರಾಜ್ಯದಲ್ಲಿ ಹೊಸ ಅಧ್ಯಾಯ

ಹುಬ್ಬಳ್ಳಿಯಲ್ಲಿ (basanagouda yatnal) ಭಾನುವಾರ ಏರ್ಪಡಿಸಿದ್ದ ರಾಮ ನವಮಿ ಹಾಗೂ ಹನುಮ ಜಯಂತ್ಯುತ್ಸವಕ್ಕೆ ಆಗಮಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪುಷ್ಪ ಮಳೆಗರೆದು ಸ್ವಾಗತಿಸಲಾಯಿತು.
ಹುಬ್ಬಳ್ಳಿಯಲ್ಲಿ (basanagouda yatnal) ಭಾನುವಾರ ಏರ್ಪಡಿಸಿದ್ದ ರಾಮ ನವಮಿ ಹಾಗೂ ಹನುಮ ಜಯಂತ್ಯುತ್ಸವಕ್ಕೆ ಆಗಮಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪುಷ್ಪ ಮಳೆಗರೆದು ಸ್ವಾಗತಿಸಲಾಯಿತು.
Published on
ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದೂ ವಿರೋಧಿಗಳ ಸರ್ಕಾರವಿದೆ. 2028 ರಾಜ್ಯದಲ್ಲಿ ಹೊಸ ಅಧ್ಯಾಯ ಬರೆಯಲಿದ್ದು, ಹಿಂದೂಗಳ ಪರ ಸರ್ಕಾರ ಬರಲಿದೆ. ನಾನೇ ಮುಖ್ಯಮಂತ್ರಿಯಾಗುವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ (basanagouda yatnal) ಭವಿಷ್ಯ ನುಡಿದರು.
ಶ್ರೀರಾಮ ಉತ್ಸವ ಸಮಿತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಲ್ಲಿಯ ಆನಂದ ನಗರದ ಲಾಸ್ಟ್ ಬಸ್ ಸ್ಟಾಪ್‌ನಲ್ಲಿ ಭಾನುವಾರ ಏರ್ಪಡಿಸಿದ್ದ 12ನೇ ವರ್ಷದ ರಾಮ ನವಮಿ ಹಾಗೂ ಹನುಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ನಮ್ಮದು ಜೆಸಿಬಿ ಸರ್ಕಾರ. ಪೊಲೀಸ್ ಠಾಣೆ ಬಳಿ ಇವುಗಳನ್ನು ನಿಲ್ಲಿಸುತ್ತೇವೆ. ಠಾಣೆ, ಪೊಲೀಸ ವಾಹನಗಳ ಮೇಲೆ ದಾಳಿ ಮಾಡಿದರೆ, ಎಕೆ 47ನಿಂದ ಅಲ್ಲಿಯೇ ಢಮ್ ಅನಿಸಿಬಿಡುತ್ತೇವೆ. ಗೃಹ ಮಂತ್ರಿಗಳಿದ್ದೂ ಉಪಯೋಗವಿಲ್ಲ. ಪ್ರತಿಯೊಂದಕ್ಕೂ ಕಠಿಣ ಕ್ರಮ ಜರುಗಿಸಲಾಗುವುದು, ನನಗೆ ಗೊತ್ತಿಲ್ಲ. ಪರಿಶೀಲಿಸಲಾಗುವುದು ಎಂದೆಲ್ಲ ಹೇಳುತ್ತಾರೆ. ನಮ್ಮ ಸರ್ಕಾರ ಬಂದರೆ ಇವೆಲ್ಲ ಇರುವುದಿಲ್ಲ ಏಕ್‌ಮಾರ್ ದೋ ತುಕ್ಡಾ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಹಿಂದೂಗಳಿಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಬರೀ ಮುಸ್ಲಿಮರಿಗೆ ಅನುದಾನ ಕೊಟ್ಟಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿಯನ್ನೇ ತೆಗೆದು ಹಾಕುತ್ತೇನೆ. ಆ ಮೀಸಲಾತಿಯನ್ನು ಹಿಂದುಳಿದವರು, ಎಸ್.ಸಿ., ಎಸ್.ಟಿ.ಗೆ ಹಂಚಿ ಬಿಡಲಾಗುವುದು ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಹಿಂದೂಗಳು ಈಗ ಜಾಗೃತರಾಗುತ್ತಿದ್ದಾರೆ. ಆದರೂ ಲವ್ ಜಿಹಾದ್ ಪ್ರಕರಣಗಳು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಹಿಂದೂಗಳು ಎಚ್ಚರಿಕೆಯಿಂದ ಇರಬೇಕು. ಲವ್‌ಜಿಹಾದ್ ಬಲೆಗೆ ಬಿದ್ದ ಯುವತಿಯ ಮನೆಗೆ ಹೋಗಿದ್ದೆ. ತಂದೆ-ತಾಯಿ ಕಣ್ಣೀರು ಹಾಕಿದರು. ನಮ್ಮ ಮಕ್ಕಳಿಗೆ ಈಗಿನಿಂದಲೇ ಸ್ವಯಂ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಇದಕ್ಕೂ ಮೊದಲು ಬಸನಗೌಡ ಪಾಟೀಲ ಯತ್ನಾಳ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ದಾರಿಯುದ್ದಕ್ಕೂ ಯತ್ನಾಳ ಅವರಿಗೆ ಹೂಮಳೆ ಗರೆಯಲಾಯಿತು.
ಪ್ರಮುಖರಾದ ಚಂದ್ರಶೇಖರ ಢವಳಗಿ, ಗೌರಿಶಂಕರ ಮೋಟ್, ಕುಮಾರ ಹಕಾರಿ, ರಮೇಶ ಕುಲಕರ್ಣಿ, ಅರುಣಕುಮಾರ ವಳಸಂಗ, ವಿ.ಕೆ. ಪಾಟೀಲ, ನಾರಾಯಣ ಮಿಸ್ಕಿನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net