bantara sangha ದೇಶದ ಪ್ರಗತಿಗೆ ಸಂಘಟಿತರಾಗಲಿ

bantara sangha ಹುಬ್ಬಳ್ಳಿಯಲ್ಲಿ ಹು-ಧಾ ಬಂಟರ ಸಂಘದಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವ್ಹೀಲ್ ಚೇರ್‌ಗಳನ್ನು ವಿತರಿಸಲಾಯಿತು.
bantara sangha ಹುಬ್ಬಳ್ಳಿಯಲ್ಲಿ ಹು-ಧಾ ಬಂಟರ ಸಂಘದಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವ್ಹೀಲ್ ಚೇರ್‌ಗಳನ್ನು ವಿತರಿಸಲಾಯಿತು.
Published on

ಹುಬ್ಬಳ್ಳಿ: ಹು-ಧಾ ಬಂಟರ ಸಂಘದಿಂದ

bantara sangha

ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಉದ್ಯಮಿ ಅಜೆಕಾರು ಸುಜಯ ಶೆಟ್ಟಿ ಶನಿವಾರ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ದೇಶವು ಪ್ರಗತಿಯ ಪಥದಲ್ಲಿ ಮುನ್ನಡೆಯಲು ಪ್ರತಿಯೊಬ್ಬರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದರು.
ಆರ್.ಎನ್. ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಬಂಟರ ಸಂಘದ ಆವರಣದಲ್ಲಿರುವ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಅಂಗವಿಕಲರಿಗೆ ವ್ಹೀಲ್‌ಚೇರ್‌ಗಳನ್ನು ವಿತರಿಸಲಾಯಿತು.
ನಂತರ ನವೀಕರಣಗೊಂಡ ಬಂಟರ ಸಂಘದ ಆಡಳಿತ ಕಚೇರಿಯನ್ನು ಬೇಂದ್ರೆ ನಗರ ಸಾರಿಗೆಯ ಪ್ರಭಾಕರ ಶೆಟ್ಟಿ ಹಾಗೂ ಹರಿಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು.
ದಾನಿಗಳಾದ ಪ್ರದೀಪ ಪಕ್ಕಲ, ಪ್ರಸನ್ನ ಶಂಕರ ಶೆಟ್ಟಿ, ಅಶೋಕಕುಮಾರ ಶೆಟ್ಟಿ ಓಝೋನ್, ಅಶೋಕಕುಮಾರ ಶೆಟ್ಟಿ ಪರಾಗ, ಕುಡ್ಲಾಸತೀಶ ಶೆಟ್ಟಿ ಅವರು ಅಂತಿಮ ವರ್ಷದ ಬಿಇ ಅಧ್ಯಯನ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿ ಶ್ರೇಯಾ ಶೆಟ್ಟಿ ವಿದ್ಯಾಭ್ಯಾಸಕ್ಕೆ 1 ಲಕ್ಷ ರೂ. ಧನ ಸಹಾಯ ನೀಡಿದರು.
ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಉಪಾಧ್ಯಕ್ಷ ಸುಧೀರ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಖಜಾಂಚಿ ದಿನೇಶ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net