bank of India ಬ್ಯಾಂಕ್ ಆಫ್ ಇಂಡಿಯಾ ಸಂಸ್ಥಾಪನ ದಿನಾಚರಣೆ
bank of india ತಾರಿಣಿ ಚರಣ್ ಸಾಹು ಮಾತನಾಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ವಾಕಥಾನ್
ಸಾರ್ವಜನಿಕ ಹಿತಕ್ಕಾಗಿ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ
ಹುಬ್ಬಳ್ಳಿ: bank of india ದೇಶದ ಮುಂಚೂಣಿ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ (ಬಿಒಐ) 121ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸೆ. 6ರಂದು ಬೆಳಗ್ಗೆ 7ಕ್ಕೆ ನಗರದಲ್ಲಿ ವಿಕಸಿತ್ ಭಾರತಕ್ಕಾಗಿ ನಶಾಮುಕ್ತ ಯುವ ಸಂದೇಶದೊಂದಿಗೆ ವಾಕಥಾನ್ ಏರ್ಪಡಿಸಲಾಗಿದೆ ಎಂದು ಬ್ಯಾಂಕಿನ ವಲಯ ವ್ಯವಸ್ಥಾಪಕ ತಾರಿಣಿ ಚರಣ ಸಾಹು ತಿಳಿಸಿದರು.
ಗೋಕುಲ ರಸ್ತೆಯಲ್ಲಿರುವ ವಲಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಗ್ರಾಹಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ 1100ಕ್ಕೂ ಹೆಚ್ಚು ಜನ ವಾಕಥಾನ್ನಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನಷ್ಟು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹುಬ್ಬಳ್ಳಿಯಲ್ಲಿ ಇದು ಎರಡನೇ ವಾಕಥಾನ್ ಆಗಿದೆ ಎಂದರು.
ಉತ್ತರ ಕರ್ನಾಟಕದ 17 ಜಿಲ್ಲೆಗಳಲ್ಲಿರುವ 62 ಶಾಖೆಗಳನ್ನು ಒಳಗೊಂಡ ವಲಯ ಕಚೇರಿ ವ್ಯಾಪ್ತಿಯಲ್ಲಿ 10 ಸಾವಿರ ಕೋಟಿ ವಹಿವಾಟು ನಡೆಸಲಾಗುತ್ತಿದೆ. ದೇಶಾದ್ಯಂತ 5500 ಶಾಖೆಗಳಿವೆ. ವಿದೇಶದಲ್ಲಿ ಸುಮಾರು 37 ಶಾಖೆಗಳಿದ್ದು, ದೇಶದ ಹೊರಗೆ ಹೆಚ್ಚಿನ ಶಾಖೆ ಹೊಂದಿದ ಮೂರನೇ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ಬಿಒಐ ಒಟ್ಟು ಜಾಗತಿಕ ವಹಿವಾಟು 18 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ ಎಂದರು.
ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು. ಆರೋಗ್ಯಕರ, ಸಕಾರಾತ್ಮಕ ಮತ್ತು ಜವಾಬ್ದಾರಿಯುತ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂಬ ಸಂದೇಶ ಸಾರುವುದು ಇದರ ಉದ್ದೇಶ. ಇದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸಾರ್ವಜನಿಕ ಹಿತಕ್ಕಾಗಿ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆಯನ್ನು ಅಂದು ಹಮ್ಮಿಕೊಳ್ಳಲಾಗಿದೆ. ಸಮುದಾಯದೊಂದಿಗೆ ಬ್ಯಾಂಕ್ ಇದ್ದು, ಇದಕ್ಕಾಗಿ ಸಿಎಸ್ಆರ್ ನಿಧಿ ಅಡಿ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಟೆಂಡರ್ ಶ್ಯೂರ್ ರಸ್ತೆ
ಬಿಒಐ 5ಕೆ ಹುಬ್ಬಳ್ಳಿ ವಾಕಥಾನ್ಗೆ (ಐದು ಕಿ.ಮೀ.) ತೋಳನಕೆರೆ ಸರ್ಕಲ್ನಲ್ಲಿ ಬೆಳಗ್ಗೆ 7.15ಕ್ಕೆ ಚಾಲನೆ ನೀಡಲಾಗುವುದು. ಟೆಂಡರ್ ಶ್ಯೂರ್ ರಸ್ತೆ ಮೂಲಕ ಕಾಡಸಿದ್ದೇಶ್ವರ ಕಾಲೇಜ್ ಬಳಿಯ ಸರ್ಕಲ್ ಮೂಲಕ ವಾಪಸ್ ಮತ್ತೆ ತೋಳನಕೆರೆ ಸರ್ಕಲ್ಗೆ ಆಗಮಿಸಲಿದೆ ಎಂದು ಡಿಜಿಎಂ ಅಭಿನವ ಪಾಂಡೆ ತಿಳಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವ ಸಂತೋಷ ಲಾಡ್, ಶಾಸಕ ಮಹೇಶ ಟೆಂಗಿನಕಾಯಿ ಇತರರು ಪಾಲ್ಗೊಳ್ಳುವರು.
ವಾಕಥಾನ್ನಲ್ಲಿ ಮಹಿಳೆ ಹಾಗೂ ಪುರುಷರ ವಿಭಾಗದಲ್ಲಿ ಪ್ರಥಮ ಹಾಗೂ ದ್ವೀತಿಯ ಬಹುಮಾನವಾಗಿ ನಾಲ್ಕು ಟ್ರೋಫಿ ನೀಡಲಾಗುವುದು. ಪಾಲ್ಗೊಂಡ ಎಲ್ಲರಿಗೂ ಮೆಡಲ್ ವಿತರಣೆ ಮಾಡಲಾಗುವುದು ಎಂದರು.
ಪ್ರೇಮ್ಜಿ ಫೌಂಡೇಷನ್, ರೋಟರಿ ಕ್ಲಬ್, ಕೆಜಿಪಿ ಫೌಂಡೇಷನ್, ಹೊಟೇಲ್ ಫಾರ್ಚುನ್, ಬಿಗ್ ಮಿಶ್ರಾ ಸೇರಿದಂತೆ ವಿವಿಧ ಸಂಘಟನೆಗಳು ವಾಕಥಾನ್ಗೆ ಸಾಥ್ ನೀಡಿವೆ. ಬಿಒಐ ಮುಖ್ಯ ವ್ಯವಸ್ಥಾಪಕ ಬಸವರಾಜ ಕುಂಬಾರ, ವ್ಯವಸ್ಥಾಪಕ ಮಹೇಶ ಹುಬ್ಬಳ್ಳಿ ಇತರರು ಗೋಷ್ಠಿಯಲ್ಲಿದ್ದರು.