banjara unity ಬಂಜಾರ ಏಕತಾ ಸಂಕಲ್ಪ ಯಾತ್ರೆಗೆ ಸ್ವಾಗತ

banjara unity ಬಂಜಾರ ಏಕತಾ ಸಂಕಲ್ಪ ಯಾತ್ರೆ ಅಂಗವಾಗಿ ಹುಬ್ಬಳ್ಳಿಗೆ ಆಗಮಿಸಿದ ಆಂಧ್ರಪ್ರದೇಶದ ಸೇವಾಗಡದ ಧರ್ಮಾಧಿಕಾರಿ ಶ್ರೀ ಮಹಾರಾಜರು, ಮಹಾರಾಷ್ಟ್ರದ ಪೌರಾಗಡದ ಧರ್ಮಗುರು ಶ್ರೀ ಬಾಬುಸಿಂಗ್​ ಮಹಾರಾಜರು, ಕರ್ನಾಟಕದ ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್​ ಸೇವಾಲಾಲ ಮಹಾರಾಜರಿಗೆ ನವನಗರದ ಬಂಜಾರ ಭವನದಲ್ಲಿ ಸತ್ಕರಿಸಲಾಯಿತು. ಶ್ರೀ ತಿಪ್ಪೇಶ್ವರ ಸ್ವಾಮೀಜಿ, ಪಾಂಡುರಂಗ ಪಮ್ಮಾರ, ಪಿ.ಎಸ್​. ರಜಪೂತ, ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಾಂಪ್ರದಾಯಿಕ ಉಡುಗೆಯಲ್ಲಿ ಪೂರ್ಣಕುಂಭ ಮೆರವಣಿಗೆ
  • ಹುಬ್ಬಳ್ಳಿಯಲ್ಲಿ ಸಮಾಜದ ಸಮಾವೇಶ
ಹುಬ್ಬಳ್ಳಿ: banjara unity ಅಖಿಲ ಭಾರತ ಬಂಜಾರ ಏಕತಾ ಸಂಕಲ್ಪ ಯಾತ್ರೆ ಅಂಗವಾಗಿ ನವನಗರದ ಬಂಜಾರ ಭವನಕ್ಕೆ ಗುರುವಾರ ಆಗಮಿಸಿದ ಧರ್ಮಗುರುಗಳಿಗೆ ಭವ್ಯ ಸ್ವಾಗತ ನೀಡಲಾಯಿತು.
ನವನಗರದ ಬಂಜಾರ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಬಂಜಾರ ಸಮಾಜದ ವತಿಯಿಂದ ಸ್ವಾಮೀಜಿಗಳ ಸ್ವಾಗತಕ್ಕೆ ಭವ್ಯ ಸಮಾರಂಭ ಏರ್ಪಡಿಸಲಾಯಿತು.
ವಾರದ ಹಿಂದೆ ಸಂಕಲ್ಪ ಯಾತ್ರೆ ಆರಂಭಿಸಿರುವ ಆಂಧ್ರಪ್ರದೇಶದ ಸೇವಾಗಡದ ಧರ್ಮಾಧಿಕಾರಿ ಶ್ರೀ ಮಹಾರಾಜರು, ಮಹಾರಾಷ್ಟ್ರದ ಪೌರಾಗಡದ ಧರ್ಮಗುರು ಶ್ರೀ ಬಾಬುಸಿಂಗ್​ ಮಹಾರಾಜರು ಹಾಗೂ ಕರ್ನಾಟಕದ ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್​ ಸೇವಾಲಾಲ ಮಹಾರಾಜರು ಗುರುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದರು.
ಬಂಜಾರ ಸಮಾಜದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪೂರ್ಣಕುಂಭದೊಂದಿಗೆ ಸ್ವಾಮೀಜಿಗಳನ್ನು ಸ್ವಾಗತಿಸಿದರು. ಸಮಾಜದ ಮುಖಂಡರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಂಜಾರ ಭವನ ಆವರಣದಲ್ಲಿ ಸಮಾಜದ ಕುಲಗುರು ಶ್ರೀಸೇವಾಲಾಲ ಅವರ ದೇವಸ್ಥಾನ ನಿರ್ಮಾಣಕ್ಕೆ ಸ್ವಾಮೀಜಿಗಳು ಭೂಮಿಪೂಜೆ ನೆರವೇರಿಸಿದರು.
ನಂತರ ನಡೆದ ಸಮಾರಂಭದಲ್ಲಿ ಸಮಾಜದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಮಾತನಾಡಿ, ದೇಶಾದ್ಯಂತ ಸಮಾಜದ ಜನರಲ್ಲಿ ಏಕತೆ ಮೂಡಿಸುವ ಸಲುವಾಗಿ ಸ್ವಾಮೀಜಿಗಳು ಕೈಗೊಂಡ ಯಾತ್ರೆಯು 18 ರಾಜ್ಯಗಳಿಗೆ ತೆರಳಲಿದೆ. ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ ಮುಂತಾದೆಡೆ ಪ್ರವಾಸ ಮುಗಿಸಿ ಇದೀಗ ಕರ್ನಾಟಕದಲ್ಲಿದೆ. ನಂತರದಲ್ಲಿ ಗೋವಾ, ಮಹಾರಾಷ್ಟ್ರಗಳಿಗೆ ಯಾತ್ರೆ ತೆರಳಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net