ಬೆಂಗಳೂರು ಶಟ್ಲರ್​ಗಳ ಮೇಲುಗೈ

ಸುಹಾಸ್​ ರೆಡ್ಡಿ ಎಂ.
ಸುಹಾಸ್​ ರೆಡ್ಡಿ ಎಂ.
Published on

ಮಂಜುನಾಥ ಎಸ್​. ಅಂಗಡಿ ಧಾರವಾಡ

ನಗರದ ಆರ್​.ಎನ್​. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಆಯೋಜಿಸಿರುವ ಯೋನೆಕ್ಸ್​- ಸನ್​ರೈಸ್​ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ ಟೂನಿರ್ಯ 19 ವರ್ಷದೊಳಗಿನ ಮತ್ತು ಪುರುಷ ಹಾಗೂ ಮಹಿಳಾ ಸಿಂಗಲ್ಸ್​ ಅರ್ಹತಾ ಸುತ್ತಿನ ಪಂದ್ಯಗಳು ನಡೆದವು. ಪುರುಷರ ಸಿಂಗಲ್ಸ್​, ಮಹಿಳಾ ಸಿಂಗಲ್ಸ್​ ಮತ್ತು 19 ವರ್ಷದೊಳಗಿನ ಪುರುಷ& ಮಹಿಳಾ ಸಿಂಗಲ್ಸ್​ ಪಂದ್ಯಗಳಲ್ಲಿ ಬೆಂಗಳೂರು ಶಟ್ಲರ್​ಗಳು ಎದುರಾಳಿಗಳನ್ನು ಮಣಿಸಿ ಮೇಲುಗೈ ಸಾಧಿಸಿ ಮುಂದಿನ ಸುತ್ತುಗಳಿಗೆ ಅರ್ಹತೆ ಪಡೆದರು.
* ಪುರುಷರ ಸಿಂಗಲ್ಸ್​, ರೌಂಡ್ 5 ವಿಜೇತರು: ಬೆಂಗಳೂರು ನಗರ ಜಿಲ್ಲೆಯ ಸುಬುಧ್​ ಸೇಥಿ, ಧ್ರುವ ಬಿಂದಹಳ್ಳಿ ಅರವಿಂದ್​, ವಿಶೇಷ್​ ಶರ್ಮಾ, ವಿದ್ಯಾನಂದ ಕಶ್ಯಪ್​ ಎ. ಮತ್ತು ವಿಶಾಲ್​ ಪಿ.ವಿ., ವರುಣ್​ ಜೆ.ಪಿ., ತೋಸನ್​ ನಾಯಕ್​, ಕೊಂಟನೂರು ಶಿವರಾಜ್​ ಜಯ ಗಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದರು.
* ಮಹಿಳಾ ಸಿಂಗಲ್ಸ್​, ರೌಂಡ್​ 3 ವಿಜೇತರು: ಬೆಂಗಳೂರು ನಗರ ಜಿಲ್ಲೆಯ ಕೀತಿರ್ ಬಾಲಾಜಿ, ಮೇಘಶ್ರೀ ಜಿ.ಎಸ್​., ಗ್ಲೋರಿಯಾ ಆಠವಳೆ, ವಿಭಾ ಎಂ.ಎನ್​., ಖುಷಿ ಎ.ಎಂ., ಅವನಿ ಕೆ. ಮೂತಿರ್, ನೀತಿ ಎಂ. ಹಾಗೂ ದಣ ಕನ್ನಡ ಜಿಲ್ಲೆಯ ರೂಥಿ ಎಂ.ಪಿ. ಜಯ ಗಳಿಸಿದರು.
* 19 ವರ್ಷದೊಳಗಿನ ಪುರುಷರ ಸಿಂಗಲ್ಸ್​, ರೌಂಡ್ 4 ವಿಜೇತರು:
ಬೆಂಗಳೂರು ನಗರ ಜಿಲ್ಲೆಯ ಶಿವರಾಜ ಕಬ್ಬೇರಳ್ಳಿ, ಕರಂಶ್​ ನಾಯ್ಡು, ಸುಹಾಸ್​ ರೆಡ್ಡಿ ಎಂ., ಸಮರ್ಥ ರಾಥೋಡ್​, ನಿಶಾನ್​ ಆರ್ಯ, ಸಾತ್ವಿಕ್​ ಎಸ್​. ಪ್ರಭು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶರವಣ ಆದಿತ್ಯ ಹಾಗೂ ದಣ ಕನ್ನಡ ಜಿಲ್ಲೆಯ ಕನಿಷ್ಕ ಬೆಂಗ್ರೆ ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿದರು.
* 19 ವರ್ಷದೊಳಗಿನ ಮಹಿಳಾ ಸಿಂಗಲ್ಸ್​, ರೌಂಡ್​ 3 ವಿಜೇತರು:
ಬೆಂಗಳೂರು ನಗರ ಜಿಲ್ಲೆಯ ಜೋಷ್ನಾ ಆನಂದ ಬಾಬು, ಶ್ರೀನಾಗಲಕ್ಷ್ಮಿ, ಅವನಿ ಕೆ. ಮೂತಿರ್, ಗೀತ್​ ಬಂಬ್ರಾಹ್​, ರೇಣುಜಾ ಸಾಯಿ ಸೂರಿಸೆಟ್ಟಿ, ಪವಿತ್ರಾ ಬಸವರಾಜ್​, ಅಂಕಿತಾ ಕೆ. ಹಾಗೂ ಬೆಳಗಾವಿಯ ಆಸ್ತಾ ಅಶ್ವಿನ್​ ಹುಬ್ಬಳ್ಳಿ ರೋಚಕ ಸೆಣಸಾಟದಲ್ಲಿ ಜಯ ಗಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net