Banajig society ವೀರಶೈವ ಲಿಂಗಾಯತ ಎರಡೂ ಒಂದೆ

Banajig society ಹುಬ್ಬಳ್ಳಿಯ ಲಿಂಗರಾಜನಗರ ಸಮುದಾಯ ಭವನದಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್​, ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. ಡಾ. ಎ.ಸಿ. ವಾಲಿ ಮಹಾರಾಜರು, ಶಂಕರಣ್ಣ ಮುನವಳ್ಳಿ, ಗುರುಪಾದಪ್ಪ ಶಿರೂರ, ತಾರಾದೇವಿ ವಾಲಿ, ಚನ್ನವಿರ ಮುಂಗರವಾಡಿ ಇತರರು ಇದ್ದರು.
Banajig society ಹುಬ್ಬಳ್ಳಿಯ ಲಿಂಗರಾಜನಗರ ಸಮುದಾಯ ಭವನದಲ್ಲಿ ಭಾನುವಾರ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್​, ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. ಡಾ. ಎ.ಸಿ. ವಾಲಿ ಮಹಾರಾಜರು, ಶಂಕರಣ್ಣ ಮುನವಳ್ಳಿ, ಗುರುಪಾದಪ್ಪ ಶಿರೂರ, ತಾರಾದೇವಿ ವಾಲಿ, ಚನ್ನವಿರ ಮುಂಗರವಾಡಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜದ ಗಣ್ಯರು, ಮುಖಂಡರ ಅಭಿಮತ
  • ಬಣಜಿಗ ಸಂಘದಿಂದ ಪ್ರತಿಭಾ ಪುರಸ್ಕಾರ ಸಮಾರಂಭ
ಹುಬ್ಬಳ್ಳಿ: Banajig society ವೀರಶೈವ ಲಿಂಗಾಯತ ಒಂದೆಯಾಗಿದ್ದು, ಸಮಾಜದ ಎಲ್ಲ ಉಪಪಂಗಡಗಳು ಒಟ್ಟಾಗಿ ಸಾಗಿದರೆ ತಡೆಯುವ ಶಕ್ತಿ ಯಾವುದೂ ಇಲ್ಲ, ಈ ದಿಸೆಯಲ್ಲಿ ಎಲ್ಲ ಸ್ವಾಮೀಜಿಗಳು ಒಂದಾಗಿ ಮಾತುಕತೆ ನಡೆಸುವಂತಾಗಲಿ ಎಂಬ ಅಭಿಪ್ರಾಯವನ್ನು ಸಮಾಜದ ಮುಖಂಡರು ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ವತಿಯಿಂದ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅನೇಕ ಗಣ್ಯರು ವೀರಶೈವ ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್​ ಮಾತನಾಡಿ, ವೀರಶೈವ ಲಿಂಗಾಯತ ಒಡೆದ ಮನೆಯಾಗಿದೆ. ಸ್ವಾಮೀಜಿಗಳಲ್ಲಿ ಒಕ್ಕಟ್ಟು ಇಲ್ಲದ ಕಾರಣಕ್ಕೆ ಸಾಮಾನ್ಯ ಜನರು ಸಮಸ್ಯೆ ಎದುರಿಸುವಂತಾಗಿದೆ. ಸ್ವತಂತ್ರ ಧರ್ಮ ಹೆಸರಿನಲ್ಲಿ ಸಮಾಜ ಒಡೆಯುವ ಬಹುದೊಡ್ಡ ಹುನ್ನಾರ ನಡೆಯುತ್ತಿದೆ. ಒಡೆದು ಆಳುವ ನೀತಿ ಮೂಲಕ ಬೇರೆಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ.
ಪ್ರತ್ಯೇಕ ಧರ್ಮದಿಂದ ಯಾವುದೇ ಪ್ರಯೋಜನವಿಲ್ಲ, ಬದಲಾಗಿ ವೀರಶೈವ ಲಿಂಗಾಯತ ಎಲ್ಲ ಉಪಪಂಗಡಗಳಿಗೆ 2ಎ ಮೀಸಲಾತಿ ಸಲುವಾಗಿ ಹೋರಾಟ ಮಾಡಿದರೆ ಅದರಿಂದ ಬಹಳಷ್ಟು ಅನುಕೂಲಗಳಿವೆ. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸದ್ಯ ನಾನು ಸಂಸದನಾಗಿರುವುದರಿಂದ ಕೇಂದ್ರದಲ್ಲಿ 2ಎ ಮೀಸಲಾತಿಗಾಗಿ ಪ್ರಯತ್ನ ಮಾಡುವೆ. ಸ್ವತಂತ್ರ ಧರ್ಮ ಎನ್ನುವವರು ಬೇಕಿದ್ದರೆ ನನ್ನ ಜತೆ ಚರ್ಚೆಗೆ ಬಂದರೆ ಅವರಿಗೆ ಉತ್ತರಿಸಲು ಸಿದ್ಧ ಎಂದು ಶೆಟ್ಟರ್​ ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಿಂದೂ ಸಮಾಜ ಬಿಟ್ಟು ವೀರಶೈವ ಲಿಂಗಾಯತವಿಲ್ಲ, ಪ್ರತ್ಯೇಕ ಮಾಡಿದರೆ ಅದರಿಂದ ಸಮಾಜದಲ್ಲಿ ಒಕ್ಕಟ್ಟು ಉಳಿಯುವುದಿಲ್ಲ. ವೀರಶೈವ ಲಿಂಗಾಯತ ಸಮಾಜವು ಸಂಘಟನೆ ಕೊರತೆಯಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಂಸ್ಕೃತಿ ಮರೆಯಾಗಿ ಲವ್​ ಜಿಹಾದ್​ನಂತ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ಇದಕ್ಕೆಲ್ಲ ಅವಕಾಶ ನೀಡಬಾರದು. ಮಕ್ಕಳಿಗೆ ಸಂಸ್ಕಾರ ಕೊಡಬೇಕು ಎಂದು ಹೇಳಿದರು.
ಕೆಎಲ್​ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ವೀರಶೈವ ಲಿಂಗಾಯತ ಎನ್ನುವುದು ಒಂದೇ ಎಂಬುದನ್ನು ಯಾರೂ ಮರೆಯಬಾರದು. ನಾವೆಲ್ಲರೂ ಒಟ್ಟಾಗಿ ಸೇವೆ ಮಾಡಬೇಕಿದೆ. ಸಮಾಜದ ವಿವಿಧ ಅಂಗಗಳನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಸಮಾಜ ಒಟ್ಟಾದರೆ ನಮ್ಮನ್ನು ಯಾರೂ ತೆಡೆಯಲು ಸಾಧ್ಯವಿಲ್ಲ. ಒಡೆದು ಆಳುವವರಿಗೆ ನಾವು ಬಲಿಯಾಗಬಾರದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net