Bakrid ಉತ್ತಮ ಮಳೆಬೆಳೆಗಾಗಿ ಪ್ರಾರ್ಥನೆ

bakrid ಹುಬ್ಬಳ್ಳಿಯ ಅಮರಗೋಳದಲ್ಲಿ ಗುರುವಾರ ಬಕ್ರೀದ್​ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
bakrid ಹುಬ್ಬಳ್ಳಿಯ ಅಮರಗೋಳದಲ್ಲಿ ಗುರುವಾರ ಬಕ್ರೀದ್​ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ತ್ಯಾಗ ಬಲಿದಾನದ ಸಂಕೇತ ಬಕ್ರೀದ್​
  • ಶ್ರದ್ಧಾ ಭಕ್ತಿಯಿಂದ ಹಬ್ಬದಾಚರಣೆ
  • ಮುಸ್ಲಿಂ ಸಮುದಾಯದಿಂದ ಸಾಮೂಹಿಕ ಪ್ರಾರ್ಥನೆ
ಹುಬ್ಬಳ್ಳಿ: Bakrid ತಾಲೂಕಿನ ಅಮರಗೋಳ, ನವನಗರ ಭಾಗದಲ್ಲಿ ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್​ ಅನ್ನು ಶ್ರದ್ಧಾ ಭಕ್ತಿಯಿಂದ ಗುರುವಾರ ಆಚರಿಸಲಾಯಿತು.
ಮುಸ್ಲಿಂ ಸಮುದಾಯದ ಜನರು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಳೆ, ಬೆಳೆ ಉತ್ತಮವಾಗಿರಲಿ, ಜನರಿಗೆ ಆರೋಗ್ಯ ಕರುಣಿಸಲಿ, ಸಮಾಜದ ಎಲ್ಲರೂ ಮತ್ತಷ್ಟು ಪ್ರಗತಿ ಹೊಂದಲಿ ಎಂದು ಧರ್ಮಗುರು ಶೌಕತಅಲೀ ಮುಲ್ಲಾ ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯ ಹಾಗೂ ದೇಶದಲ್ಲಿಯೂ ಸಮೃದ್ಧಿ ನೆಲೆಸಲಿ, ಹಿಂದೂ ಮುಸ್ಲಿಂ ಬಾಂಧವರ ಸಹೋದರತ್ವ ಇನ್ನಷ್ಟು ಗಟ್ಟಿಗೊಳ್ಳಲಿ, ಸರ್ವರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಗ್ರಾಮದಿಂದ ಮುಸ್ಲಿಂ ಬಾಂಧವರು ಅಲ್ಲಾಹುವಿನ ನಾಮ ಸ್ಮರಣೆ ಮಾಡುತ್ತ ಈದ್ಗಾಕ್ಕೆ ಆಗಮಿಸಿದರು. ನಮಾಜ ನಂತರ ಪರಸ್ಪರರು ಶುಭಾಶಯ ವಿನಿಯೋಗಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net