ನಗರದದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.14ರಂದು ಬೆಳಗ್ಗೆ 5.30ಕ್ಕೆ ಉಡುಪಿ ಶ್ರೀಧರ ಭಟ್ ಅವರ ತಂಡದಿoದ ಪೂರ್ಣ ನವಗ್ರಹ ಶಾಂತಿ, ಹೋಮ, ಗಣ ಹೋಮ, ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಮಂತ್ರ ಪುಷ್ಪ, ಅಲಂಕಾರ ಮಹಾ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ, ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಧವಾನಂದ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ ಸಮ್ಮುಖ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರಂಭ ಉದ್ಘಾಟಿಸುವರು. ಸಂಜೆ 5 ಗಂಟೆಗೆ ಅಯ್ಯಪ್ಪ ಸ್ವಾಮಿ ಉತ್ಸವ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅಂಬಾರಿ ಮೆರವಣಿಗೆ ಉದ್ಘಾಟಿಸುವರು. ಮೆರವಣಿಗೆಯು ರೆವ್ಯೆನ್ಯೂ ಕಾಲನಿಯಿಂದ ಆರಂಭವಾಗಿ ಸಪ್ತಾಪುರ, ಜಯನಗರ, ಶ್ರೀನಗರ, ದಾಸನಕೊಪ್ಪ ವರ್ತುಳ ಸೇರಿ ವಿವಿಧ ಬಡಾವಣೆ ಹಾಗೂ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಶ್ರೀ ಸಾಯಿ ಮಂದಿರಕ್ಕೆ ಆಗಮಿಸಲಿದೆ ಎಂದರು.