ಹುಬ್ಬಳ್ಳಿ ಎಪಿಎಂಸಿಯಲ್ಲಿ ‘ಅಯ್ಯಪ್ಪ ಮಹಾಸಂಗಮ Ayyappa

Ayyappa ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯರ್ದಸಿ ಶಿವಪ್ಪ ಬಾರಕಿ.
Ayyappa ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯರ್ದಸಿ ಶಿವಪ್ಪ ಬಾರಕಿ.
Published on

ಪ್ರಮುಖ ಮುಖ್ಯಾಂಶಗಳು

  • ಭಿನ್ನವತ್ತಳೆ ಸಮರ್ಪಣೆ ಮಾಡಲಾಗುವುದು.
  • ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಇದೇ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ರತ್ನ ಪ್ರಶಸ್ತಿ ನೀಡಲಾಗುವುದು.
  • ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯರ್ದಶಿ ಶಿವಪ್ಪ ಬಾರಕಿ, ಮುತ್ತು ಸ್ವಾಮಿ ಅವರ 18ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 7 ಗಂಟೆಗೆ ಭೈರಿದೇವರಕೊಪ್ಪ ಅಯ್ಯಪ್ಪಸ್ವಾಮಿ ಸನ್ನಿಧಾನದಿಂದ ಎಪಿಎಂಸಿಯಲ್ಲಿ ನಡೆಯಲಿರುವ ಪೂಜಾಮಂಟಪದವರೆಗೆ ಕುಂಭ ಕಳಸದೊಂದಿಗೆ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಬೆಳಗ್ಗೆ 10.30ಕ್ಕೆ ನಗರದ ಶಿರೂರು ಪಾರ್ಕ್​ನ ಆನಂದ ಗುರುಸ್ವಾಮಿ, ಗೋಕುಲನ ಮೋಹನ ಗುರುಸ್ವಾಮಿ, ಶಬರಿನಗರದ ಕೆ. ಎಂ. ಮೋಹನ ಗುರುಸ್ವಾಮಿ ಹಾಗೂ ಬೆಂಗಳೂರಿನ ಎಚ್. ಆರ್. ಸಂಪತ್ ಕುಮಾರ ಗುರುಸ್ವಾಮಿ ಅವರಿಂದ ಉದ್ಘಾಟನೆ ನಡೆಯಲಿದೆ.
ನಂತರ ಸಾನ್ನಿಧ್ಯ ವಹಿಸಲಿರುವ ತೀರ್ಥಹಳ್ಳಿ ಶ್ರೀಕ್ಷೇತ್ರ ಬಿಜ್ಜವಳ್ಳಿಯ ಡಾ. ವಿಶ್ವ ಸಂತೋಷ ಭಾರತಿ ಅವರಿಂದ ಉಪನ್ಯಾಸ ಜರುಗಲಿದೆ ಎಂದು ಹೇಳಿದರು.
ಧಾರವಾಡದ ಬಸವರಾಜ ಪಟ್ಟಣಶೆಟ್ಟಿ ಗುರಸ್ವಾಮಿ, ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ, ಸ್ವರ್ಣ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿ. ಎಸ್. ವಿ. ಪ್ರಸಾದ, ವಿಜಯಪುರದ ರಾಮಚಂದ್ರ ಕರಾಂಡೆ ಗುರುಸ್ವಾಮಿ, ರಾಣೆಬೆನ್ನೂರಿನ ಮಂಜುನಾಥ ಮಣೆಗಾರ ಗುರುಸ್ವಾಮಿ, ಹುಬ್ಬಳ್ಳಿ ಶಬರಿ ಕುಟೀರದ ಶಿವಪ್ಪ ಬಾರಕಿ,ಹಾಗೂ ಭೈರಿದೇವರಕೊಪ್ಪದ ನಾರಾಯಣ ಜಾಧವ ಗುರುಸ್ವಾಮಿ ಅವರಿಗೆ ಭಿನ್ನವತ್ತಳೆ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯ 48 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಇದೇ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ರತ್ನ ಪ್ರಶಸ್ತಿ ನೀಡಲಾಗುವುದು ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ ಉಪಸ್ಥಿತರಿರುವರು. ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರರಾದ ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರು ಉಮೇಶ ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಂಜೆ 6 ಗಂಟೆಗೆ ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. 5 ಸಾವಿರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸೇರಿದಂತೆ ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮೋಹನ ಗುರುಸ್ವಾಮಿ, ನಾರಾಯಣ ಗುರುಸ್ವಾಮಿ, ಮುತ್ತು ಸ್ವಾಮಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net