ಧಾರವಾಡ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣೆ, ಚಿಕಿತ್ಸೆ, ಯೋಗಾಸನ ಮತ್ತು ಜೀವನ ಶೈಲಿ ಮಾಹಿತಿ ಶಿಬಿರವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಉದ್ಘಾಟಿಸಿದರು.
ಧಾರವಾಡ: ಅಲೋಪಥಿ ಚಿಕಿತ್ಸೆ ತೆಗೆದುಕೊಂಡರೆ ಅದು ರೋಗದ ಲಣಗಳನ್ನು ಮಾತ್ರ ಕಡಿಮೆ ಮಾಡುತ್ತದೆ. ಆದರೆ, ಆಯುಷ್ ವೈದ್ಯ ಪದ್ಧತಿಯಡಿ ಚಿಕಿತ್ಸೆಯು ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣೆ, ಚಿಕಿತ್ಸೆ, ಯೋಗಾಸನ ಮತ್ತು ಜೀವನ ಶೈಲಿ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಿನನಿತ್ಯದ ಜೀವನ ಶೈಲಿಯಲ್ಲಿನ ಬದಲಾವಣೆ, ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಹಾಗೂ ಸೂಕ್ತ ಮನೆಮದ್ದು, ಗಿಡ ಮೂಲಿಕೆ ಔಷ-ಗಳನ್ನು ವೈದ್ಯರ ಸಲಹೆಯ ಮೇರೆಗೆ ಬಳಸುವುದರಿಂದ ಸಂರ್ಪೂಣ ಗುಣಮುಖರಾಗಬಹುದು. ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲ ಸರ್ಕಾರಿ ನೌಕರರು ತಮ್ಮ ಕರ್ತವ್ಯಗಳ ಜತೆಗೆ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಸರ್ಕಾರಿ ನೌಕರರ ಸಂದ ಧಾರವಾಡ ಜಿಲ್ಲಾ ಅಧ್ಯ ಸಿದ್ಧನಗೌಡರ ಮಾತನಾಡಿದರು. ಆಯುಷ್ ಪಂಚಕರ್ಮ ವಿಭಾಗದ ತ ವೈದ್ಯಾಧಿಕಾರಿ ಡಾ. ಸಂತೋಷ ತಾಡಪತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಮತ್ತು ತ ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ಶಶಿಧರ ತಳಕಲ್ ಅವರು ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವ ಯೋಗಾಸನಗಳನ್ನು ತಿಳಿಸಿಕೊಟ್ಟರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎ್. ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ವೇದಿಕೆಯಲ್ಲಿದ್ದರು.
ಆರೋಗ್ಯ ಶಿಬಿರದಲ್ಲಿ 260 ಜನ ಲಾನುಭವಿಗಳು ಆಯುಷ್ ಆರೋಗ್ಯ ಸೇವೆ ಪಡೆದುಕೊಂಡರು. ಎಲ್ಲ ಶಿಬಿರಾಥಿರ್ಗಳಿಗೆ ಉತ್ತಮ ಗುಣಮಟ್ಟದ ಆಯುರ್ವೇದ ಔಷಧ ಮತ್ತು ಆಯುಷ್ ಅರಿವು ಕರ ಪತ್ರ ಮತ್ತು ಕೈಪಿಡಿಗಳನ್ನು ಉಚಿತವಾಗಿ ವಿತರಿಸಲಾಯಿತು. 46 ಜನ ಲಾನುಭವಿಗಳಿಗೆ ಹೆಚ್ಚಿನ ಆಯುರ್ವೇದ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಧಾರವಾಡ ಮತ್ತು ಆಯುಷ್ ಪಂಚಕರ್ಮ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದರು.
ಹಿರಿಯ ವೈದ್ಯಾಧಿಕಾರಿ ಡಾ. ಅನುರಾಧಾ ಬಲ್ಸಾವರ್ ನಿರೂಪಿಸಿದರು. ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಸವಿತಾ ಹುಣಶಿಮರದ, ಡಾ. ಸಂತೋಷ ತಾಡಪತ್ರಿ ಹಾಗೂ ಡಾ. ಈಶ್ವರಪ್ಪ ಉಗಾರ ಆರೋಗ್ಯ ತಪಾಸಣೆ ಮಾಡಿದರು. ಶ್ರೀಶೈಲ ಕುಮಾರ ಚವ್ಹಾಣ ಔಷಧ ವಿತರಿಸಿದರು.