Ayurved survey ಸಿಸಿಆರ್ಎಎಸ್ ಸಮೀಕ್ಷೆಗೆ ಡಾ. ವೀರಯ್ಯ ಆಯ್ಕೆ
Ayurved survey ರಾಷ್ಟ್ರೀಯ ಸಮೀಕ್ಷೆಗೆ ತಜ್ಞ ವೈದ್ಯರಾಗಿ ಆಯ್ಕೆಯಾದ ಧಾರವಾಡ ಮಹಾಗಣಪತಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ವೀರಯ್ಯ ಹಿರೇಮಠ ಅವರನ್ನು ಟ್ರಸ್ಟ್ ಚೇರ್ಮನ್ ಡಾ. ಅಶೋಕ ಬಂಗಾರಶೆಟ್ಟರ್ ಅಭಿನಂದಿಸಿದರು.
Published on:
Copied
Follow Us
ಹುಬ್ಬಳ್ಳಿ: Ayurved survey ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಆಯುರ್ವೇದ ಸಂಶೋಧನಾ ಮಂಡಳಿಯ (ಸಿಸಿಆರ್ಎಎಸ್) ನೇತ್ರ ಕ್ರಿಯಾಕಲ್ಪ ಚಿಕಿತ್ಸಾ ಪದ್ಧತಿಗಳ ರಾಷ್ಟ್ರೀಯ ಸಮೀಕ್ಷೆಗೆ ಧಾರವಾಡದ ಮಹಾಗಣಪತಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನಿರ್ದೇಶಕ, ಶಾಲಾಕ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ. ವೀರಯ್ಯ ಹಿರೇಮಠ ಅವರನ್ನು ತಜ್ಞ ವೈದ್ಯರಾಗಿ ಆಯ್ಕೆ ಮಾಡಲಾಗಿದೆ.
ಈ ಸಮೀಕ್ಷೆಯನ್ನು ಬೆಂಗಳೂರು ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆಯು (ಸಿಎಆರ್ಐ), ದೇಶದಾದ್ಯಂತ ಇರುವ ಸಿಸಿಆರ್ಎಸ್ ಸಂಶೋಧನಾ ಸಂಸ್ಥೆಗಳು ಹಾಗೂ ಪ್ರಾದೇಶಿಕ ಕೇಂದ್ರಗಳ ಸಹಯೋಗದಲ್ಲಿ ನಡೆಸುತ್ತಿದೆ. ಆಯುರ್ವೇದದ ಪ್ರಮುಖ ಚಿಕಿತ್ಸೆಯಾದ ನೇತ್ರ ಕ್ರಿಯಾಕಲ್ಪ ವಿಧಾನಗಳ ವೈಜ್ಞಾನಿಕ ದಾಖಲೀಕರಣ ಮತ್ತು ಪ್ರಮಾಣೀಕರಣ ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಭಾಗವಾಗಿ ಡಾ. ವೀರಯ್ಯ ಹಿರೇಮಠ ಅವರು ಕನಿಷ್ಠ 10 ಚಿಕಿತ್ಸಾ ಪ್ರಕರಣಗಳನ್ನು ಧ್ವನಿ ಹಾಗೂ ದೃಶ್ಯ ಸಮೇತ (ಆಡಿಯೋ-ವೀಡಿಯೋ) ದಾಖಲಿಸಲಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ, ಕ್ರಿಯಾಕಲ್ಪವು ಸುರಕ್ಷಿತ, ಪರಿಣಾಮಕಾರಿ ಚಿಕಿತ್ಸೆಯಾಗಿ ಮಹತ್ವ ಪಡೆದಿದೆ.