ಹುಬ್ಬಳ್ಳಿಯಲ್ಲಿ ಭಾನುವಾರ ayogya 2 ’ಅಯೋಗ್ಯ-2’ ಚಲನಚಿತ್ರದ ಮೂರನೇ ಹಾಡು ಬಿಡುಗಡೆ ವೇಳೆ ನಟ ನೀನಾಸಂ ಸತೀಶ, ಸಹ ನಟರಾದ ಗಿರೀಶ ಶಿವಣ್ಣ, ಶಿವರಾಜ ಕೆ.ಆರ್. ಪೇಟೆ ನೃತ್ಯ ಮಾಡಿ ರಂಜಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
‘ಅಯೋಗ್ಯ-2’ ಚಲನಚಿತ್ರದ 3ನೇ ಹಾಡು ಬಿಡುಗಡೆ
ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ’ಅಯೋಗ್ಯ-2’ayogya 2 ಚಲನಚಿತ್ರದ ಮೂರನೇ ಹಾಡು ‘ಹುಡುಗಿ ಒಪ್ಪಿಕೊಂಡ್ರೆ ಪ್ರೀತಿ ಅದ್ದೂರಿ’ ಬಿಡುಗಡೆ ಮಾಡಲಾಯಿತು.
ಚಿತ್ರದ ಮೂರೂ ಹಾಡುಗಳಿಗೆ ನಟ ನೀನಾಸಂ ಸತೀಶ, ಸಹ ನಟರಾದ ಗಿರೀಶ ಶಿವಣ್ಣ, ಶಿವರಾಜ ಕೆ.ಆರ್. ಪೇಟೆ ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಇದಕ್ಕೂ ಮೊದಲು ಮಾತನಾಡಿದ ನೀನಾಸಂ ಸತೀಶ, ಉತ್ತರ ಕರ್ನಾಟಕದ ಜನರು ಕರ್ನಾಟಕದ ಚಿತ್ರರಂಗವನ್ನು ಬೆಳೆಸಿದೆ. ಎಲ್ಲ ನಾಯಕರನ್ನೂ ಒಪ್ಪಿಕೊಂಡು ಹಾರೈಸಿದ್ದಾರೆ. ಈಗ ನನ್ನ ‘ಅಯೋಗ್ಯ-2’ ಚಲನಚಿತ್ರ ಆಗಸ್ಟ್ 7ರಂದು ತೆರೆ ಕಾಣಲಿದ್ದು, ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡುವಂತೆ ವಿನಂತಿಸಿದರು.
ಚಿತ್ರ ಸಾಹಿತಿ ಚೇತನಕುಮಾರ ಮಾತನಾಡಿ, ಆಟೋದ ಹಿಂದುಗಡೆ ಬರೆದಿದ್ದ ಸಾಲು ಈ ಸಾಂಗ್‌ಗೆ ಪ್ರೇರಣೆ. ಇದನ್ನು ಆಟೋ ಚಾಲಕರಿಗೆ ಅರ್ಪಿಸುವುದಾಗಿ ಹೇಳಿದರು. ನಿರ್ದೇಶಕ ಎಸ್. ಮಹೇಶ ಕುಮಾರ, ಗಿರೀಶ ಶಿವಣ್ಣ, ಶಿವರಾಜ ಕೆ.ಆರ್.ಪೇಟೆ, ಚಿತ್ರದ ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕೆ ಮುನ್ನ ಗಾಯಕಿ ಎಸ್. ಜಾನಕಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ನಿರ್ಮಾಪಕ ಎಂ. ಮುನೇಗೌಡ, ಇತರರಿದ್ದರು.