ಐಸಿಆರ್ಐಎಸ್ಎಟಿ, ಐಎಎಸ್ಸಿಎನಿಂದ ಸೆ. 12ರಂದು ನವದೆಹಲಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ರೈತರಿಗೆ ಚಿರಪರಿಚಿತ ಜಿಪಿಬಿಡಿ- 4 ತಳಿಯನ್ನು ಈವರೆಗೆ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಇದು ಎಲೆಚುಕ್ಕೆ ಮತ್ತು ತುಕ್ಕು ರೋಗ ನಿರೋಧಕ ಗುಣ ಹೊಂದಿದ್ದು, ಅಧಿಕ ಇಳುವರಿ ನೀಡುತ್ತದೆ.