avirbhav ಪ್ರಶಿಕ್ಷಣಾರ್ಥಿಗಳು ಭಾಷಾ ಕೌಶಲ ಬೆಳೆಸಿಕೊಳ್ಳಿ

avirbhav ಹುಬ್ಬಳ್ಳಿಯ ಐಬಿಎಂಆರ್​ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಸಮಾರಂಭದಲ್ಲಿ ಕವಿವಿ ಶಿಕ್ಷಣ ವಿಭಾಗದ ಡೀನ್​ ಡಾ. ಅರವಿಂದ ಕರಬಸನಗೌಡ್ರ, ಕಾನೂನು ವಿವಿ ಸಿಂಡಿಕೇಟ್​ ಸದಸ್ಯ ಡಾ. ಎಚ್​.ವಿ. ಬೆಳಗಲಿ, ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಡಾ. ಇಗ್ನೇಶ್​ ಸಕ್ರಿ, ಇತರರು ಇದ್ದರು.
avirbhav ಹುಬ್ಬಳ್ಳಿಯ ಐಬಿಎಂಆರ್​ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಸಮಾರಂಭದಲ್ಲಿ ಕವಿವಿ ಶಿಕ್ಷಣ ವಿಭಾಗದ ಡೀನ್​ ಡಾ. ಅರವಿಂದ ಕರಬಸನಗೌಡ್ರ, ಕಾನೂನು ವಿವಿ ಸಿಂಡಿಕೇಟ್​ ಸದಸ್ಯ ಡಾ. ಎಚ್​.ವಿ. ಬೆಳಗಲಿ, ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಡಾ. ಇಗ್ನೇಶ್​ ಸಕ್ರಿ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾನೂನು ವಿವಿ ಸಿಂಡಿಕೇಟ್​ ಸದಸ್ಯ ಡಾ. ಬೆಳಗಲಿ ಸಲಹೆ
  • ಐಬಿಎಂಆರ್ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ
ಹುಬ್ಬಳ್ಳಿ: avirbhav ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನದಂತೆ ಶಿಕ್ಷಕರಾಗುವವರು ಪ್ರತಿಯೊಂದು ಮಕ್ಕಳಿಗೆ ದಾರಿದೀಪವಾಗಬೇಕು. ಉತ್ತಮ ಭಾಷಾ ಕೌಶಲ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್​ ಸದಸ್ಯ ಡಾ. ಎಚ್​.ವಿ. ಬೆಳಗಲಿ ಹೇಳಿದರು.
ಇಲ್ಲಿಯ ಐಬಿಎಂಆರ್​ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ ಸಮಾರಂಭ ಆವಿರ್ಭಾವ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಉಡುಗೆ ತೊಡುಗೆಗಳು ಸಹ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ವೇಷಭೂಷಣಗಳು ಉತ್ತಮವಾಗಿರಬೇಕು. ತಾಂತ್ರಿಕತೆ ಎಷ್ಟೇ ಮುಂದುವರಿದರೂ ಮಕ್ಕಳಿಗೆ ಶಿಕ್ಷಕರೇ ಮಾದರಿಯಾಗುತ್ತಾರೆ ಎಂದರು.
ಅತಿಥಿಯಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಡೀನ್​ ಡಾ. ಅರವಿಂದ ಕರಬಸನಗೌಡ್ರ ಮಾತನಾಡಿ, ಮೊಬೈಲ್​ ಬಳಕೆ ಹಿತಮಿತವಾಗಿರಬೇಕು. ದೈಹಿಕ ಮಾನಸಿಕ ಸದೃಡತೆಗೆ ನಿತ್ಯ ಒಂದಿಷ್ಟು ವ್ಯಾಯಾಮ, ಧ್ಯಾನ ಮಾಡಬೇಕು. ಕೌಶಲದೊಂದಿಗೆ ಜ್ಞಾನ ಗಳಿಸಿದರೆ ಮಾತ್ರ ಪ್ರಮಾಣ ಪತ್ರಕ್ಕೆ ಬೆಲೆ ಬರುತ್ತದೆ. ಅದು ಜೀವನ ರೂಪಿಸುತ್ತದೆ ಎಂದರು.
ಐಬಿಎಂಆರ್​ ಸಿಇಒ ಡಾ. ಇಗ್ನೇಶ ಸಕ್ರಿ, ಅರುಣಕುಮಾರ, ಪ್ರೊ. ಅಣ್ಣಪ್ಪ, ಪ್ರಾಧ್ಯಾಪಕರಾದ ಪ್ರವಿಣ ಟಿ, ಶಾರದಾ ಡಂಬಳ, ಅಭಿಷೇಕ, ಆಯಿಷಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net