

"ಸಿಬಿಟಿಯಿಂದ ಸಂಚರಿಸುವ ಬಸ್ಗಳಿಗೆ ಸ್ಪರ್ಧೆಯೊಡ್ಡುವಷ್ಟು ಆಟೋಗಳು ಸಂಚರಿಸುತ್ತಿವೆ. ಪಾಲಿಕೆಯಿಂದ ಪ್ರತ್ಯೇಕ ಆಟೋ ನಿಲ್ದಾಣ ವ್ಯವಸ್ಥೆ ಮಾಡಿಸಿಕೊಳ್ಳಲು ಆಟೋ ಸಂಟನೆಗಳಿಗೆ ಸೂಚಿಸಲಾಗಿದೆ. ಬಸ್ಗಳು ಅಂಕಣ ಪ್ರವೇಶಿಸುವ ದ್ವಾರದ ಬಳಿ ಆಟೋಗಳು ನಿಲ್ಲದಂತೆ ಆರಂಭದಲ್ಲಿ ಪೊಲೀಸರು ನಿಯಂತ್ರಿಸಿದ್ದರು. ಆದರೆ, ಆಟೋ ಚಾಲಕರಿಗೆ ಪೊಲೀಸರ ಭಯವೂ ಇಲ್ಲದಂತೆ ಸಂಚರಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕೋರಿ ಪೊಲೀಸ್ ಇಲಾಖೆಗೆ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ.
— ಎಂ. ಸಿದ್ದಲಿಂಗೇಶ, ವಿಭಾಗೀಯ ನಿಯಂತ್ರಣಾಧಿಕಾರಿ, ಹು&ಧಾ ನಗರ ಸಾರಿಗೆ ವಿಭಾಗ