ಆಟೋ ಎಲ್​ಪಿಜಿ(Auto LPG) ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಆಟೋ ಎಲ್​ಪಿಜಿ ಅಲಭ್ಯ (Auto LPG)ಹಾಗೂ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಶೇಖರಯ್ಯ ಮಠಪತಿ, ಮುರುಳಿ ಇಂಗಳಹಳ್ಳಿ, ರಾಜೇಶ ಬಿಜವಾಡ, ದಾವಲಸಾಬ್ ಕುರಹಟ್ಟಿ, ಶ್ರೀಕಾಂತ ಗಡಾದ, ಮಹೇಶ ದೊಡಮನಿ, ಇತರರು ಇದ್ದರು.
ಆಟೋ ಎಲ್​ಪಿಜಿ ಅಲಭ್ಯ (Auto LPG)ಹಾಗೂ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಶೇಖರಯ್ಯ ಮಠಪತಿ, ಮುರುಳಿ ಇಂಗಳಹಳ್ಳಿ, ರಾಜೇಶ ಬಿಜವಾಡ, ದಾವಲಸಾಬ್ ಕುರಹಟ್ಟಿ, ಶ್ರೀಕಾಂತ ಗಡಾದ, ಮಹೇಶ ದೊಡಮನಿ, ಇತರರು ಇದ್ದರು.
Published on
ಹುಬ್ಬಳ್ಳಿ: ಏಜೆನ್ಸಿಗಳು ಆಟೋ ಎಲ್​ಪಿಜಿ (Auto LPG)ದರವನ್ನು ಮನಸ್ಸಿಗೆ ಬಂದಂತೆ ಏರಿಕೆ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ನೇತೃತ್ವದಲ್ಲಿ ನೀಲಿಜಿನ್ ರಸ್ತೆ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ರವಾನಿಸಿದರು.
ಯುದ್ಧದ ಸಂದರ್ಭವನ್ನು ಆಟೋ ಎಲ್​ಪಿಜಿ ಬಂಕ್​ಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಮೊದಲು ಪ್ರತಿ ಲೀಟರ್​ಗೆ ಇದ್ದ 58-61 ರೂ. ದರ ಈಗ 105 ರೂ.ಗೆ ತಲುಪಿದೆ. ಒಂದೆಡೆ ಆಟೋ ಎಲ್​ಪಿಜಿ ಪೂರೈಕೆ ಇಲ್ಲದೆ ಬಹುತೇಕ ಬಂಕ್​ಗಳು ಬಂದ್ ಆಗಿವೆ. ಹುಬ್ಬಳ್ಳಿಯಲ್ಲಿರುವ ಚಾಲೂ ಇರುವ ಎರಡು ಬಂಕ್​ಗಳು ಮನಬಂದಂತೆ ದರ ಆಕರಣೆ ಮಾಡುತ್ತಿವೆ ಎಂದು ದೂರಿದ್ದಾರೆ.
ಈಗಾಗಲೇ ಬಹುತೇಕ ಎಲ್​ಪಿಜಿ ಆಟೋಗಳನ್ನು ಮನೆ ಮುಂದೆ ನಿಲ್ಲಿಸಲಾಗಿದ್ದು, ನಿತ್ಯದ ದುಡಿಮೆಯಿಂದ ಜೀವನ ಸಾಗಿಸುವ ಆಟೋ ಚಾಲಕರು ಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆ ಮಾಡಿರುವ ಬಂಕ್​ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತದಿಂದ ಮೇಲ್ವಿಚಾರಕರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುರುಳಿ ಇಂಗಳಹಳ್ಳಿ, ರಾಜೇಶ ಬಿಜವಾಡ, ದಾವಲಸಾಬ್ ಕುರಹಟ್ಟಿ, ಶ್ರೀಕಾಂತ ಗಡಾದ, ಮಹೇಶ ದೊಡಮನಿ, ಬಾಬರ್ ಜಿಮ್ಖಾನೆ, ನಿಂಗಪ್ಪ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net