ದರೋಡೆಕೋರರು ಮನೆಯ ಗೇಟ್ ಮುರಿಯುತ್ತಿದ್ದ ವೇಳೆ ಶಬ್ದ ಕೇಳಿದ ಸುತ್ತಮುತ್ತಲಿನವರು ಎಚ್ಚರಗೊಂಡಿದ್ದಾರೆ. ಮಾಸ್ಕ್ ಧರಿಸಿದ್ದ ದರೋಡೆಕೋರರು ಕೈಯಲ್ಲಿ ಆಯುಧ ಸೇರಿ ಇತರ ಹರಿತ ವಸ್ತುಗಳನ್ನು ಹಿಡಿದುಕೊಂಡಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೀಟ್ ಪೊಲೀಸರು ಬರುತ್ತಿದ್ದಂತೆ ಅಡಗಿ ಕುಳಿತು ನಂತರ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಕೇಶ್ವಾಪುರ ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿದ್ದು, ಯಾವುದೇ ಗ್ಯಾಂಗ್ ಇತ್ತಕಡೆ ಆಗಮಿಸಿಲ್ಲ ಎಂದು ತಿಳಿಸಿದ್ದಾರೆ.