attacking ಬೈಕ್ ಅಡ್ಡಗಟ್ಟಿ ಹಲ್ಲೆ

ಯುವಕನೊಬ್ಬನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ attacking ಹಲ್ಲೆ
ಯುವಕನೊಬ್ಬನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ attacking ಹಲ್ಲೆ
Published on
ಹುಬ್ಬಳ್ಳಿ: ಹಳೇ ದ್ವೇಷದಿಂದ ನಾಲ್ಕೈದು ಜನರು ಸೇರಿ ಯುವಕನೊಬ್ಬನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ attacking ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಉಣಕಲ್ ವೃತ್ತದ ಬ್ರಹ್ಮಲಿಂಗೇಶ್ವರ ಹೋಟೆಲ್ ಹತ್ತಿರ ನಡೆದಿದೆ.
ಸಾಯಿ ಪ್ರಸಾದ ಹಲ್ಲೆಗೊಳಗಾಗಿದ್ದಾನೆ. ಶಶಾಂಕ ಹಾಗೂ ಗಗನ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ ವರೂರಿನಲ್ಲಿ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಮೇ 27ರಂದು ಸಾಯಿಪ್ರಸಾದ ಹೋಗುವಾಗ ಅವನ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net