Astrology ಜ್ಯೋತಿಷ್ಯ ಅಧ್ಯಯನಕ್ಕೆ ವೈಜ್ಞಾನಿಕ ಸ್ಪರ್ಶ ಅಗತ್ಯ

Astrology ಹುಬ್ಬಳ್ಳಿಯ ಜ್ಯೋತಿರ್ವಿಜ್ಞಾನ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜ್ಯೋತಿರ್ವಿಜ್ಞಾನ ಸಂಸ್ಥೆಯ ಘಟಿಕೋತ್ಸವವನ್ನು ಡಾ. ನಾಗೇಶ ಭಟ್​ ಉದ್ಘಾಟಿಸಿದರು. ವಿದ್ವಾನ್​ ಗಣೇಶ ಹೆಗಡೆ, ಡಾ. ಎಂ.ಎಸ್​. ಹುಲ್ಲೊಳ್ಳಿ, ಕೃಷ್ಣ ಭಟ್​, ಎಸ್​.ವಿ. ಘೋರ್ಪಡೆ, ಮುಂತಾದವರು ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿರ್ವಿಜ್ಞಾನ ಸಂಸ್ಥೆಯ ಘಟಿಕೋತ್ಸವ ಉದ್ಘಾಟಿಸಿದ ಡಾ. ನಾಗೇಶ
  • ಜ್ಯೋತಿಷ್ಯ ಸನಾತನ ಶಾಸ್ತ್ರ
ಹುಬ್ಬಳ್ಳಿ: Astrology ಜ್ಯೋತಿಷ್ಯ ಸನಾತನ ಶಾಸ್ತ್ರವಾಗಿದ್ದು, ನಿತ್ಯ ಜೀವನದಲ್ಲಿ ಜನಸಾಮಾನ್ಯರಿಗೆ ಬಹಳಷ್ಟು ಉಪಯುಕ್ತವಾಗಿದೆ. ಜ್ಯೋತಿಷ್ಯ ಆಸಕ್ತರು ಆಧುನಿಕತೆಯ ಅಗತ್ಯತೆಗಳನ್ನು ಅನುಸರಿಸಿ ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಬೇಕು ಎಂದು ಡಾ. ನಾಗೇಶ ಭಟ್​ ಹೇಳಿದರು.
ಇಲ್ಲಿಯ ಜ್ಯೋತಿರ್ವಿಜ್ಞಾನ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜ್ಯೋತಿರ್ವಿಜ್ಞಾನ ಸಂಸ್ಥೆಯ 27ನೇ ಘಟಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ವಿದ್ವಾನ್​ ಗಣೇಶ ಹೆಗಡೆ ಅವರ ಮುಂದಾಳತ್ವದಲ್ಲಿ ಸಂಸ್ಥೆ ಅತ್ಯುತ್ತಮವಾದ ಕಾರ್ಯಕ್ರಮ ಮಾಡುತ್ತಿದೆ. ಸಾವಿರಕ್ಕೂ ಹೆಚ್ಚು ಆಸಕ್ತರಿಗೆ ಜ್ಯೋತಿಷ್ಯ, ವಾಸ್ತು ತರಬೇತಿ ನೀಡಿದೆ ಎಂದರು.
ಎನ್​.ಸಿ. ಪಾಟೀಲ, ಅನಿಲ ಕಲಾಲ, ವಿನಯ ಕಲಾಲ, ಶಿಲ್ಪಾ ಉಪಾಧ್ಯಾಯ ಮುಂತಾದವರು ಜ್ಯೋತಿಷ್ಯ ಬ್ರಹ್ಮ ಪ್ರಬಂಧ ಮಂಡಿಸಿದರು. ಜ್ಯೋತಿಷ್ಯ ಪ್ರವೇಶಿಕ, ಆಚಾರ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಡಾ. ಎಂ.ಎಸ್​. ಹುಲ್ಲೊಳ್ಳಿ, ಕೃಷ್ಣ ಭಟ್​, ಎಸ್​.ವಿ. ಘೋರ್ಪಡೆ, ಡಾ. ಸತೀಶ್​ ಹಿರೇಮಠ, ವಿದ್ವಾನ್​ ನಿತ್ಯಾನಂದ ದೇಸಾಯಿ, ಶ್ರೀನಿವಾಸ ಕಟ್ಟಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net