(asishvidyarthi) ಹೊಸ ಬದಲಾವಣೆ ನಿತ್ಯ ಮನನವಾಗಲಿ

ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯಮ ಸಮಾವೇಶ-ಟೈಕಾನ್ ಸಮಾರೋಪದಲ್ಲಿ ಖ್ಯಾತ ಹಿಂದಿ ಚಲನಚಿತ್ರ ನಟ ಆಶಿಷ್ ವಿದ್ಯಾರ್ಥಿ,(asishvidyarthi) ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯಮ ಸಮಾವೇಶ-ಟೈಕಾನ್ ಸಮಾರೋಪದಲ್ಲಿ ಖ್ಯಾತ ಹಿಂದಿ ಚಲನಚಿತ್ರ ನಟ ಆಶಿಷ್ ವಿದ್ಯಾರ್ಥಿ,(asishvidyarthi) ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
Published on
ಹುಬ್ಬಳ್ಳಿ: ನಮ್ಮದೇ ಬದುಕು ಇದು. ನಿತ್ಯವೂ ಹೊಸ ಬದಲಾವಣೆಯನ್ನು ಆರಂಭಿಸಬೇಕು. ಇದುವೇ ದಿನವೂ ಮನನ ಮಾಡುತ್ತಿರಬೇಕು ಎಂದು ಖ್ಯಾತ ಹಿಂದಿ ಚಲನಚಿತ್ರ ನಟ ಆಶಿಷ್ ವಿದ್ಯಾರ್ಥಿ (asishvidyarthi) ಸಲಹೆ ನೀಡಿದರು.
ಟೈ ಹುಬ್ಬಳ್ಳಿ ಶಾಖೆ ವತಿಯಿಂದ ಇಲ್ಲಿಯ ಹೋಟೆಲ್ ಡೆನಿಸನ್‌ನಲ್ಲಿ ಆಯೋಜಿಸಿರುವ ಉದ್ಯಮ ಸಮಾವೇಶ -ಟೈಕಾನ್ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ಹಸಿವು ಇದ್ದರೆ ಸಾಧನೆಯ ಹಠ ಹುಟ್ಟುತ್ತದೆ. ಕಲಿಕೆಗೆ ವಯಸ್ಸು ಅಡ್ಡಿ ಬರುವುದಿಲ್ಲ. ಆಧುನಿಕ ಜಗತ್ತಿಗೆ ಒಗ್ಗೂಡಿಸಿಕೊಳ್ಳಬೇಕು. ನಾನು ಎಲ್ಲಿಂದ ಬಂದಿದ್ದೇನೆ ಎನ್ನುವುದು ಮುಖ್ಯವಲ್ಲ. ಕನಸು ಕಂಡು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡಬೇಕು. ನಮ್ಮ ಜೀವನವನ್ನು ನಾವೇ ಶುರು ಮಾಡಿಕೊಳ್ಳಬೇಕು ಎಂದರು.
ಉತ್ತರ ಕರ್ನಾಟಕ ಎಲ್ಲ ರಂಗದಲ್ಲಿಯೂ ಛಾಪು ಮೂಡಿಸಬೇಕು. ಇದಕ್ಕೆ ತಾವೆಲ್ಲರೂ (ಉದ್ಯಮಿಗಳು) ಒಗ್ಗೂಡಿ ಕೆಲಸ ಮಾಡಬೇಕು. ವಿಶ್ವದ ಭೂಪಟದಲ್ಲಿ ಉತ್ತರ ಕರ್ನಾಟಕ ತನ್ನದೇ ಆದ ಹೆಸರು ಗಳಿಸುವಂತಾಗಬೇಕು ಎಂದರಲ್ಲದೇ ತಾವು ಚಿತ್ರರಂಗದಲ್ಲಿ ಬೆಳೆದ ಬಂದ ಹಾದಿ ಮತ್ತು ಈಗಲೂ ತಾವು ಮೈಗೂಡಿಸಿಕೊಂಡಿರುವ ನಟನೆ, ಹಾಡು, ಜನಸಂಪರ್ಕದ ವಿವರಗಳನ್ನು ನೀಡಿದರು.
ಇದಕ್ಕೂ ಮೊದಲು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ‘ಉತ್ತರ ಕರ್ನಾಟಕ ರೈಸಿಂಗ್’ ಎನ್ನುವ ಶಿರೋನಾಮೆ ಕಲ್ಪನೆ ಅದ್ಬುತವಾಗಿದೆ. ಟೈ ಹುಬ್ಬಳ್ಳಿ ಶಾಖೆ ಪ್ರತಿ ವರ್ಷವೂ ವಿನೂತನವಾಗಿ ಸಮಾವೇಶಗಳನ್ನು ಆಯೋಜಿಸುತ್ತಿದೆ. ನವೋದ್ಯಮಿಗಳನ್ನು ಬೆಳೆಸುವ, ಪ್ರೋತ್ಸಾಹಿಸುವ ರೀತಿ ಚೆನ್ನಾಗಿದೆ. ಬಹಳಷ್ಟು ವಿಷಯಗಳ ತಜ್ಞರು ಬಂದು ಇಲ್ಲಿ ಉಪನ್ಯಾಸ ನೀಡಿ, ಜ್ಞಾನದ ಭಂಡಾರವನ್ನು ಧಾರೆ ಎರೆಯುತ್ತಿರುವುದು ಸಂತಸದ ವಿಷಯ ಎಂದರು.
ಟೈ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಗಿರೀಶ ಮಾನೆ, ಸಂಚಾಲಕ ವಿಶಾಲ ನಾಡಗೌಡ, ಮಹಿಳಾ ವಿಂಗ್ ಅಧ್ಯಕ್ಷೆ ಪ್ರಭಾ ಹಂದಿಗೋಳ, ಡಾ. ವಿವೇಕ ಪಾಟೀಲ, ಪ್ರಶಾಂತ ಹೆಬಸೂರ, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net