ಹುಬ್ಬಳ್ಳಿ: ಇಲ್ಲಿಯ ಕೆಜೆಇಟಿ ಸಂಸ್ಥೆಯ ಆರ್ಯನ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ (aryanschool) ಇತ್ತೀಚೆಗೆ ‘ಉತ್ಕರ್ಷ ಆಟವಾಡೋ ಆರ್ಯನ್ಸ್ ಆಟವಾಡೋ 2025’ ಎಂಬ ವಾರ್ಷಿಕ ಕ್ರೀಡಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ, ಆದಾಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್ ರಾಕೇಶ ಭದ್ರಾಪೂರ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಳ್ಳಬೇಕು. ಶಿಸ್ತು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದರು.
ಪಾಲಕರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಒಟ್ಟು ಕ್ರೀಡಾ ಚಾಂಪಿಯನ್ ಜಲ ಹೌಸ್ ಗೆದ್ದರೆ, ಪೃಥ್ವಿ ಹೌಸ್ ರನ್ನರ್-ಅಪ್ ಆಗಿ ಹೊರಹೊಮ್ಮಿತು.
ಆಡಳಿತ ಮಂಡಳಿ ಅಧ್ಯಕ್ಷ ರಮೇಶ ಬಾಫಣಾ, ಉಪಾಧ್ಯಕ್ಷ ವಿಕ್ರಮ್ ಜೈನ್, ಕಾರ್ಯದರ್ಶಿ ಸಂದೀಪ ಜೈನ್, ಖಜಾಂಚಿ ಪ್ರವೀಣ ಜೈನ್, ನಿರ್ದೇಶಕರಾದ ಗೌತಮ್ ಬಾಫಣಾ, ನಿರ್ಮಲ್ ಮೆಹ್ತಾ, ಪ್ರಾಚಾರ್ಯೆ ಡಾ. ಸಿರೀಷ್ ಎಲಿಜಬತ್, ಇತರರು ಇದ್ದರು.