ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಸಾಹಿತಿಗಳು, ಕಲಾವಿದರ ಬೆಂಬಲ

ಧಾರವಾಡ ಪಾಲಿಕೆ ಕಟ್ಟಡದ ಎದುರು ನಡೆಯುತ್ತಿರುವ ಪ್ರತ್ಯೇಕ ಪಾಲಿಕೆ ಧರಣಿಯಲ್ಲಿ ಸಾಹಿತಿಗಳು, ಕಲಾವಿದರ ಸಂದ ಸದಸ್ಯರು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಧಾರವಾಡ ಪಾಲಿಕೆ ಕಟ್ಟಡದ ಎದುರು ನಡೆಯುತ್ತಿರುವ ಪ್ರತ್ಯೇಕ ಪಾಲಿಕೆ ಧರಣಿಯಲ್ಲಿ ಸಾಹಿತಿಗಳು, ಕಲಾವಿದರ ಸಂದ ಸದಸ್ಯರು ಪಾಲ್ಗೊಂಡು ಬೆಂಬಲ ಸೂಚಿಸಿದರು.
Published on
ಧಾರವಾಡ: ನಗರದ ಪಾಲಿಕೆ ಕಟ್ಟಡದ ಎದುರು ನಡೆಯುತ್ತಿರುವ ಪ್ರತ್ಯೇಕ ಪಾಲಿಕೆ ಧರಣಿಯಲ್ಲಿ ಗುರುವಾರ ಸಾಹಿತಿಗಳು, ಕಲಾವಿದರ ಸಂದ ಸದಸ್ಯರು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಗುರುವಾರ 21 ದಿನ ಪೂರೈಸಿತು.
ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶಟ್ಟಿ ಮಾತನಾಡಿ, ಎಚ್​ಡಿಎಂಸಿಯಿಂದ ಧಾರವಾಡ ನಗರವನ್ನು ಕಡೆಗಣಿಸಲಾಗುತ್ತಿದೆ. ಇಲ್ಲಿನ ಸಾಹಿತಿಗಳು ಧಾರವಾಡದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಆದರೂ ಕಚೇರಿ ಕೆಲಸ ಆಗಬೇಕಾದರೆ ಹುಬ್ಬಳ್ಳಿಗೆ ಹೋಗಬೇಕು. ಇದರಿಂದ ಜನ ರೋಸಿ ಹೋಗಿದ್ದಾರೆ. ಧಾರವಾಡಕ್ಕೆ ಹಿಂದಿನಿಂದಲೂ ಮಲತಾಯಿ ಧೋರಣೆ ಅನುಸರಿಸುತ್ತ ಬರಲಾಗಿದೆ. ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆಯ ಹೋರಾಟಕ್ಕೆ ಪ್ರತಿಯೊಬ್ಬ ಧಾರವಾಡಿಗರು ಬೆಂಬಲ ಸೂಚಿಸಬೇಕು ಎಂದರು.
ಕಲಾವಿದರ ಸಂಘದ ಪರವಾಗಿ ರವಿ ಕುಲಕಣಿರ್ ಬೆಂಬಲ ನೀಡಿ ಮಾತನಾಡಿದರು.
ಹೇಮಾ ಪಟ್ಟಣಶಟ್ಟಿ, ವಿಠ್ಠಲ ಕೊಪ್ಪದ, ಗೋಪಾಲ ಉಣಕಲ್​, ಬಾಬು ಈಳಿಗೇರ, ಆಶಾ ಸೈಯದ, ವಿಶ್ವನಾಥ ರಾಯದುರ್ಗ, ಈರಪ್ಪ ತುರಮುರಿ, ಬಿ.ಡಿ. ಹೀರೆಮಠ, ಗುರುರಾಜ ಹುಣಶಿಮರದ, ವೆಂಕಟೇಶ ಮಾಚಕನೂರ, ಶಿವಶಂಕರ ಹಂಪಣ್ಣವರ, ಮೋಹನ ರಾಮದುರ್ಗ, ಆನಂದ ಯಾವಗಲ್​, ಸುರೇಶ ಬೇದರೆ, ಎಂ.ಸಿ. ನೀಲಗಾರ, ಎಂ.ಎಂ. ಬೇಪಾರಿ. ಕವಿತಾ ಕಬ್ಬೇರ, ಇತರರಿದ್ದರು.
21ನೇ ದಿನದ ಉಪವಾಸ ಸತ್ಯಾಗ್ರಹದಲ್ಲಿ ಗುರುರಾಜ ಕಟ್ಟೆನ್ನವರ, ನೀಲಕುಮಾರ ಗೊರವಿ, ಶ್ರೀಧರ ಶೇಟ್​, ರವಿ ಭಾಂಡಗೆ, ಮಾರುತಿ ಜಲಗೆರಾ, ಲಕ್ಷ$್ಮಣ ತೋಪೋಜಿ, ಈರಣ್ಚ ಚಿಕ್ಕಬೆಳ್ಳಿಕಟ್ಟಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net