ಕೃತಕ ಬುದ್ಧಿಮತ್ತೆ ಕೌಶಲ ಅಗತ್ಯ

ರಾಜೇಶ್ ಪಾರಿಶ್ವಾಡ್, ಪ್ರೊ.ಸಂಜಯಕುಮಾರ ಮಾಲಗತ್ತಿ
ರಾಜೇಶ್ ಪಾರಿಶ್ವಾಡ್, ಪ್ರೊ.ಸಂಜಯಕುಮಾರ ಮಾಲಗತ್ತಿ
Published on
ಧಾರವಾಡ: ಎ.ಐ.ತಂತ್ರಜ್ಞಾನದೊoದಿಗೆ ಕಾರ್ಯ ನಿರ್ವಹಿಸುವ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಅಮೆರಿಕಾದ ಕೆಮಿಕ ಸೊಸೈಟಿಯ ಗ್ಲೋಬಲ್ ಸ್ಟೆಟರ್ಜಿ ಆಫ್ ಸೊಸೈಟಿ ಪ್ರೋಗಾಂ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್ ಪಾರಿಶ್ವಾಡ್ ಹೇಳಿದರು.
ಅವರು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿದ್ಯುನ್ಮಾನ ಮಾಧ್ಯಮ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಹನ ಕೂಟದಲ್ಲಿ ಮಾತನಾಡಿದರು. ತಂತ್ರಜ್ಞಾನ ಬದಲಾವಣೆ ವೇಗ ಕಂಡುಕೊಳ್ಳುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಪತ್ರಿಕಾರಂಗಕ್ಕೆ ಬೇಕಾಗಿರುವ ಕೌಶಲ ಅಳವಡಿಸಿಕೊಂಡು, ಬದಲಾಗುತ್ತಿರುವ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಅವಕಾಶಗಳ ಕುರಿತು ಗಮನ ಹರಿಸಬೇಕು. ಎಐ ತಂತ್ರಜ್ಞಾನದಲ್ಲಿ ಮುಂದಿನ ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಬರಲಿದ್ದು, ವಿದ್ಯಾರ್ಥಿಗಳು ಇದರ ಅಧ್ಯಯನದತ್ತ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಸಂಜಯಕುಮಾರ ಮಾಲಗತ್ತಿ ಮಾತನಾಡಿ, ನಮ್ಮ ವಿಭಾಗದ ಹಳೆಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ವಿಭಾಗದ ಕೀರ್ತಿ ಹೆಚ್ಚಿಸಿದ್ದಾರೆ. ಹೀಗಾಗಿ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ನಡುವೆ ಉತ್ತಮ ಸ್ನೇಹ ಬಾಂಧವ್ಯ ಹೊಂದುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿ ತಾಂತ್ರಿಕತೆಯ ಅಧ್ಯಯನ ಹಾಗೂ ಭವಿಷ್ಯದ ತಂತ್ರಜ್ಞಾನಗಳ ಕುರಿತು ಕುತೂಹಲದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ವಿಭಾಗದ ಹಿರಿಯ ಪ್ರಾಧ್ಯಾಪಕ ಜೆ.ಎಂ.ಚoದುನವರ ಮಾತನಾಡಿ, ವಿದ್ಯಾರ್ಥಿಗಳು ಸಂವಹನ ಕೌಶಲ, ಬರವಣಿಗೆ, ತಂತ್ರಜ್ಞಾನ ಹಾಗೂ ವಿಜ್ಞಾನ ಕುರಿತ ಲೇಖನಗಳನ್ನು ಗ್ರಹಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net