Art exhibition ಬೆಂಗಳೂರಲ್ಲಿ ಹುಬ್ಬಳ್ಳಿ ಕಲಾವಿದರ ಪ್ರದರ್ಶನ
Art exhibition ಹುಬ್ಬಳ್ಳಿಯಲ್ಲಿ ಚಿತ್ರಕಲಾ ಪ್ರದರ್ಶನದ ಕ್ಯಾಟ್ಲಾಗ್ ಅನ್ನು ಮೇಯರ್ ದುರ್ಗಮ್ಮ ಬಿಜವಾಡ ಬಿಡುಗಡೆ ಮಾಡಿದರು. ಕಲಾವಿದರಾದ ಚಂದ್ರು ಯಡ್ರಾಮಿ, ಜಿ.ಆರ್. ಮಲ್ಲಾಪುರ, ಕೆ.ವಿ. ಶಂಕರ, ಸುಮಾ ಶೇಟ್, ಮಂಜುಳಾ ಕೆ.ವಿ, ಗಿರೀಶ ದೈವಜ್ಞ, ಶಕುಂತಲಾ ವರ್ಣೇಕರ, ವಿಜಯ ಧೋಂಗಡಿ ಇತರರು ಉಪಸ್ಥಿತರಿದ್ದರು.
Published on:
Copied
Follow Us
ಹುಬ್ಬಳ್ಳಿ: Art exhibition ಒಂದು ಸಮೂಹ ಹಾಗೂ ಎರಡು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಹುಬ್ಬಳ್ಳಿಯ 18 ಕಲಾವಿದರು ಬೆಂಗಳೂರಿನಲ್ಲಿ ಜುಲೈ 18ರಿಂದ ನಾಲ್ಕು ದಿನಗಳ ಏರ್ಪಡಿಸಿದ್ದಾರೆ.
ಬೆಂಗಳೂರಿನ ಕಸ್ತೂರಬಾ ರಸ್ತೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ 18 ಕಲಾವಿದರ "ಹೂ ಬಳ್ಳಿ ವರ್ಣ ಸಂಗಮ' ಸಮೂಹ ಚಿತ್ರಕಲಾ ಪ್ರದರ್ಶನ, ಕೆ.ವಿ. ಶಂಕರ ಅವರ ನಾನು ನನ್ನ ಸುತ್ತ ಮತ್ತು ವಿಜಯ ಧೋಂಗಡಿ ಅವರ ಸ್ತ್ರೀ ಕೃತಿ ಎರಡು ಏಕವ್ಯಕ್ತಿ ಪ್ರದರ್ಶನಗಳು ಪ್ರತ್ಯೇಕ ಗ್ಯಾಲರಿಯಲ್ಲಿ ನಡೆಯಲಿವೆ.
ಪ್ರತಿ ದಿನ ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ಪ್ರದರ್ಶನ ನಡೆಯಲಿದೆ. ದೃಶ್ಯಕಲಾ ಇತಿಹಾಸಕಾರರಾದ ಕೆ.ವಿ. ಸುಬ್ರಮಣ್ಯಂ ಪ್ರದರ್ಶನ ಉದ್ಘಾಟಿಸುವರು. ಹಿರಿಯ ಕಲಾವಿದರಾದ ಎ. ಸುಬ್ರಮಣಿಯನ್, ಎ.ಎಂ. ಪ್ರಕಾಶ, ಬಾಬು ಜತ್ತಕರ್ ಪಾಲ್ಗೊಳ್ಳುವರು.
ಹುಬ್ಬಳ್ಳಿ ಕಲಾವಿದರು ಸೇರಿ ಮಾಡುತ್ತಿರುವ ಈ ಪ್ರದರ್ಶನದ ಕ್ಯಾಟ್ಲಾಗ್ ಅನ್ನು ಹುಬ್ಬಳ್ಳಿ ಧಾರವಾಡ ಮೇಯರ್ ದುರ್ಗಮ್ಮ ಬಿಜವಾಡ ಅವರು ಸೋಮವಾರ ನಗರದಲ್ಲಿ ಬಿಡುಗಡೆ ಮಾಡಿದರು.
ಕಲಾವಿದರಾದ ಚಂದ್ರು ಯಡ್ರಾಮಿ, ಜಿ.ಆರ್. ಮಲ್ಲಾಪುರ, ಕೆ.ವಿ. ಶಂಕರ, ಸುಮಾ ಶೇಟ್, ಮಂಜುಳಾ ಕೆ.ವಿ, ಗಿರೀಶ ದೈವಜ್ಞ, ಶಕುಂತಲಾ ವರ್ಣೇಕರ, ವಿಜಯ ಧೋಂಗಡಿ ಇತರರು ಉಪಸ್ಥಿತರಿದ್ದರು.