arrested ಹಳೇ ಹುಬ್ಬಳ್ಳಿ ಪೊಲೀಸರಿಂದ ಮೂವರ ಬಂಧನ

arrested ಹಳೇಹುಬ್ಬಳ್ಳಿ ಠಾಣೆ ಪೊಲೀಸರು
arrested ಹಳೇಹುಬ್ಬಳ್ಳಿ ಠಾಣೆ ಪೊಲೀಸರು
Published on
ಹುಬ್ಬಳ್ಳಿ: ಅಪ್ರಾಪ್ತೆಗೆ ಮಗು ಜನಿಸುವಂತೆ ಮಾಡಿದ್ದಲ್ಲದೆ, ಮತ್ತೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ್ದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿಯ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು arrested ಬಂಧಿಸಿದ್ದಾರೆ.
ದೌರ್ಜನ್ಯ ಎಸಗಿದ ಅಬ್ದುಲ್‌ಕರೀಂ, ಮಗು ಮಾರಾಟಕ್ಕೆ ಮಧ್ಯವರ್ತಿಯಾಗಿದ್ದ ಜಿಯಾವುಲ್ ನಾಸಾವಾಲೆ ಮತ್ತು ಮಗು ಪಡೆದ ಮಂಜುನಾಥ ಸುರಂಗೇಕರ ಬಂಧಿತರು.
ಅಪ್ರಾಪ್ತೆಯನ್ನು ಪುಸಲಾಯಿಸಿ ಅಬ್ದುಲ್ ಕರೀಂ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದ ಪಾಲಕರು, ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ, ಮಗುವನ್ನು ಮಾರಾಟ ಮಾಡಿದ್ದರು ಎನ್ನಲಾಗಿತ್ತು. ತನಿಖೆ ನಡೆಸಿದಾಗ ಮಗು ಮಾರಾಟ ಮಾಡಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ, ಮಧ್ಯವರ್ತಿಯಾಗಿದ್ದ ಮತ್ತು ಮಗುವನ್ನು ಖರೀದಿಸಿದವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net