ರಕ್ಷಣಾ ಇಲಾಖೆ ಜಾಗಕ್ಕೆ (Army Land) ಸೇನಾಧಿಕಾರಿಗಳ ಭೇಟಿ

ಹುಬ್ಬಳ್ಳಿ ವಿಜಯನಗರದಲ್ಲಿರುವ ರಕ್ಷಣಾ ಇಲಾಖೆ ಜಾಗದಲ್ಲಿ ಎನ್​ಸಿಸಿ ಅಧಿಕಾರಿಗಳು ಹಾಕಿರುವ ಟೆಂಟ್ (Army Land)).
ಹುಬ್ಬಳ್ಳಿ ವಿಜಯನಗರದಲ್ಲಿರುವ ರಕ್ಷಣಾ ಇಲಾಖೆ ಜಾಗದಲ್ಲಿ ಎನ್​ಸಿಸಿ ಅಧಿಕಾರಿಗಳು ಹಾಕಿರುವ ಟೆಂಟ್ (Army Land)).
Published on

ಪ್ರಮುಖ ಮುಖ್ಯಾಂಶಗಳು

  • ಸೇನಾಧಿಕಾರಿಗಳು ಧಿಡೀರ್ ಭೇಟಿ
  • ರಕ್ಷಣಾ ಇಲಾಖೆ ಜಾಗದ ಬಗ್ಗೆ ಪರಿಶೀಲನೆ
  • ವಿಷಜಂತುಗಳ ತಾಣ
ರಕ್ಷಣಾ ಇಲಾಖೆ ಜಾಗದ ಸುತ್ತಲೂ ವಿವಿಧ ಬಣ್ಣಗಳ ಧ್ವಜಗಳನ್ನು ನೆಟ್ಟಿದ್ದಲ್ಲದೇ, ತಾತ್ಕಾಲಿಕ ಟೆಂಟ್ ಅನ್ನೂ ಹಾಕಿದ್ದರು. ಎನ್​ಸಿಸಿ ಕರ್ನಾಟಕದ ಹಿರಿಯ ಅಧಿಕಾರಿ ಅರುಣಕುಮಾರ ಅವರು ಭೇಟಿ ನೀಡಿ, ರಕ್ಷಣಾ ಇಲಾಖೆ ಜಾಗದ ಕುರಿತು ಮಾಹಿತಿ ಪಡೆದುಕೊಂಡರು.
ರಕ್ಷಣಾ ಇಲಾಖೆ ಜಾಗದಲ್ಲಿದ್ದ ಗೂಡಂಗಡಿಯನ್ನು ಒಂದು ತಾಸಿಗೂ ಹೆಚ್ಚು ಕಾಲ ಬಂದ್ ಮಾಡಲಾಗಿತ್ತು. ಗೂಡಂಗಡಿಯೂ ನಮ್ಮ ಜಾಗದಲ್ಲಿಯೇ ಇದೆ ಎಂಬ ಮಾಹಿತಿಯನ್ನು ಎನ್​ಸಿಸಿ ಸ್ಥಳೀಯ ಅಧಿಕಾರಿಗಳು ಅರುಣಕುಮಾರ ಅವರಿಗೆ ನೀಡಿದರು.
ಸಂಜೆ 6 ಗಂಟೆ ನಂತರ ಜಾಗದ ಸುತ್ತಲೂ ನೆಟ್ಟಿದ್ದ ಧ್ವಜಗಳನ್ನು ಹಾಗೂ ತಾತ್ಕಾಲಿಕ ಟೆಂಟ್ ಅನ್ನು ಅಧಿಕಾರಿಗಳು ತೆಗೆದುಕೊಂಡು ಹೋದರು.
ರಕ್ಷಣಾ ಇಲಾಖೆ ಜಾಗದ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಎನ್​ಸಿಸಿ ಹಿರಿಯ ಅಧಿಕಾರಿಗಳು ಆಗಮಿಸಿದ್ದರೆಂದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ ಅವರಿಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಜಯನಗರದಲ್ಲಿ ರಕ್ಷಣಾ ಇಲಾಖೆಗೆ ಸೇರಿರುವ 17.1 ಎಕರೆ ಜಾಗ ಇದೆ. ಈ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಿಷಜಂತುಗಳ ತಾಣವಾಗಿದೆ. ಈ ಜಾಗವನ್ನು ಸ್ವಚ್ಛ ಮಾಡುವುದಕ್ಕಾಗಲಿ, ಅಭಿವೃದ್ಧಿಗೊಳಿಸುವುದಕ್ಕಾಗಲಿ ರಕ್ಷಣಾ ಇಲಾಖೆ ಅವಕಾಶ ನೀಡುತ್ತಿಲ್ಲ.
ಈ ಜಾಗದಿಂದ ಮುಖ್ಯ ರಸ್ತೆ ಸಂರ್ಪಸುವ ಜಾಗದಲ್ಲಿ ಡಾಂಬರೀಕರಣಕ್ಕಾಗಲಿ ಅಥವಾ ಸಿಮೆಂಟ್ ರಸ್ತೆ ನಿರ್ವಿುಸುವುದಕ್ಕೂ ರಕ್ಷಣಾ ಇಲಾಖೆಯವರು ಅನುಮತಿ ನೀಡುತ್ತಿಲ್ಲ.
ಹೀಗಾಗಿ, ಈ ಜಾಗವನ್ನು ಮಹಾನಗರ ಪಾಲಿಕೆ ಅಥವಾ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿ, ಈ ಜಾಗದ ಮೌಲ್ಯದ ಎರಡರಷ್ಟು ಬೆಲೆಯ ಜಾಗವನ್ನು ಪಡೆದುಕೊಳ್ಳುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರು ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಧಾರವಾಡ ಬಳಿಯ ಮುಮ್ಮಿಗಟ್ಟಿ ಹೊರವಲಯದಲ್ಲಿ ಸುಮಾರು 25 ಎಕರೆ ಜಾಗವನ್ನೂ ರಕ್ಷಣಾ ಇಲಾಖೆಗೆ ತೋರಿಸಿದ್ದು, ಅಧಿಕಾರಿಗಳು ಆಸಕ್ತಿ ತೋರಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಈ ಕುರಿತು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕರ್ನಾಟಕದಲ್ಲಿರುವ ಭಾರತೀಯ ಸೇನೆಯ ಜಾಗದ ಸಂಯೋಜನಾಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಹಾಗೂ ಹಿರಿಯ ಸೇನಾಧಿಕಾರಿ ದಿವ್ಯಾ ಅವರೊಂದಿಗೆ ರ್ಚಚಿಸಿದ್ದಾರೆ. ಇಲ್ಲಿನ ಜಾಗದ ಬದಲಾಗಿ ಪ್ರತ್ಯೇಕ ಜಾಗ ನೀಡುವ, ಜಾಗ ಖರೀದಿಸುವ ಹಾಗೂ ಜಾಗವನ್ನು ಲೀಸ್ ನೀಡುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ.
ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಹ ಈ ಜಾಗದ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಶೀಘ್ರ ಚರ್ಚೆ ನಡೆಸಲಿದ್ದಾರೆ. ಇದಕ್ಕಾಗಿ ಇಲ್ಲಿನ ವಿಜಯನಗರದಲ್ಲಿರುವ ರಕ್ಷಣಾ ಇಲಾಖೆ ಜಾಗದ ಡ್ರೋಣ್ ವಿಡಿಯೋ ಚಿತ್ರೀಕರಣ ಹಾಗೂ ಫೋಟೊ ಅಲ್ಬಮ್ಳನ್ನು ಸಿದ್ಧವಾಗಿಟ್ಟುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net