ಸಚಿವ ಲಾಡ್​- ಜಕ್ಕಪ್ಪನವರ ಮಧ್ಯೆ ಜಟಾಪಟಿ

ಸಚಿವ ಲಾಡ್​- ಜಕ್ಕಪ್ಪನವರ ಮಧ್ಯೆ ಜಟಾಪಟಿ
ಸಚಿವ ಲಾಡ್​- ಜಕ್ಕಪ್ಪನವರ ಮಧ್ಯೆ ಜಟಾಪಟಿ
Published on
ಧಾರವಾಡ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನುದಾನ ಬಳಕೆ ಹಾಗೂ ಸೌಲಭ್ಯ ಹಂಚಿಕೆ ವಿಚಾರವಾಗಿ ಸಭೆಯಲ್ಲಿ ಸಚಿವ ಸಂತೋಷ ಲಾಡ್​ ಹಾಗೂ ವಿಧಾನ ಪರಿಷತ್​ ಸದಸ್ಯ ಎಫ್​.ಎಚ್​. ಜಕ್ಕಪ್ಪನವರ ಮಧ್ಯೆ ಕೆಡಿಪಿ ಸಭೆಯಲ್ಲಿ ಜಟಾಪಟಿ ನಡೆಯಿತು. ಈ ವೇಳೆ ಜಕ್ಕಪ್ಪನವರ ಸಭೆಯಿಂದ ಹೊರನಡೆಯಲು ಮುಂದಾದ ಘಟನೆ ಕೂಡ ನಡೆಯಿತು.
ಸಚಿವ ಲಾಡ್​ ಇಲಾಖಾವಾರು ಪ್ರಗತಿ ಪರಿಶೀಲಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಜಕ್ಕಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯ ಹಂಚಿಕೆ ವಿಚಾರ ಪ್ರಸ್ತಾಪಿಸಿದರು. ನಿಧಾನವಾಗಿ ಮಾತನಾಡಿ ಎಂದು ಲಾಡ್​ ಹೇಳಿದಾಗ, ಜಕ್ಕಪ್ಪನವರ " ನನ್ನ ಧ್ವನಿಯೇ ಹೀಗೆ. ಜಿಲ್ಲಾಡಳಿತ ಎಸ್​ಸಿ& ಎಸ್​ಟಿಗಳ ಬಗ್ಗೆ ನಿಷ್ಕಾಳಜಿ ತೋರುತ್ತಿದೆ. ಎಸ್​ಸಿ, ಎಸ್​ಟಿ ಸಮಾಜದಲ್ಲಿ ಹುಟ್ಟಿದ್ದೇ ತಪ್ಪಾ? ನೀವು ಮಾತನಾಡಲು ಅವಕಾಶ ನೀಡುತ್ತಿಲ್ಲ. ಸಭೆಯಿಂದ ಹೋಗುತ್ತೇನೆ ಎಂದರು. ಆಗ ಸಚಿವ ಲಾಡ್​, "ನಿಮಗೆ ಹೊರಗೆ ಹೋಗಿ ಎನ್ನುತ್ತಿಲ್ಲ. ಹೋಗುವುದಾದರೆ ಹೋಗಿ' ಎಂದಾಗ, ಜಕ್ಕಪ್ಪನವರ ಎದ್ದು ಹೋಗಲು ಮುಂದಾದರು. ಶಾಸಕ ಎಂ.ಆರ್​. ಪಾಟೀಲ, ವಿ.ಪ. ಸದಸ್ಯರಾದ ಪ್ರದಿಪ ಶೆಟ್ಟರ್​, ಇತರರು ಸಮಾಧಾನಪಡಿಸಿದರು.
ಸಭೆ ಮುಂದುವರಿದಾಗ ಜಕ್ಕಪ್ಪನವರ, ಜಿಲ್ಲೆಯಲ್ಲಿ ಗೌಳಿ ಸಮುದಾಯದವರಿಗೆ ಸಾಗುವಳಿ ಚೀಟಿ ನೀಡುತ್ತಿಲ್ಲ. ಅದೇ ಪ್ರದೇಶದಲ್ಲಿ ನಿವೃತ್ತ ಪೊಲೀಸ್​ ಅಧಿಕಾರಿ ಜ್ಯೋತಿಪ್ರಕಾಶ ಮಿಜಿರ್ ಅವರಿಗೆ 120 ಎಕರೆ ಜಮೀನಿಗೆ ಸಾಗುವಳಿ ಚೀಟಿ ನೀಡಲಾಗಿದೆ ಎಂದರು. ಅರಣ್ಯ ಕಾಯ್ದೆಯಡಿ ಸಾಗುವಳಿ ಚೀಟಿ ನೀಡಲು ದಾಖಲೆಗಳು ಬೇಕು. ವಾಸವಿದ್ದರೂ ದಾಖಲೆ ಇಲ್ಲದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ. 120 ಎಕರೆಯ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ಸಚಿವ ಲಾಡ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net