areca cheating ಅಡಿಕೆ ದಾಸ್ತಾನು ಹೆಸರಲ್ಲಿ ವಂಚನೆ

areca cheating ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
areca cheating ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
Published on

ಹುಬ್ಬಳ್ಳಿ: ಬ್ಯಾಂಕ್‌ಗೆ ಅಡಿಕೆ ದಾಸ್ತಾನಿನ ದಾಖಲೆ ಹಾಗೂ ರಸೀದಿ ಹಾಜರುಪಡಿಸಿ

areca cheating

, ಅವುಗಳ ಆಧಾರದ ಮೇಲೆ 3.50 ಕೋಟಿ ರೂ. ಸಾಲ ಪಡೆದು ಮರುಪಾವತಿಸದೆ ವಂಚಿಸಿದ ಆರೋಪದಡಿ ಆರು ಜನರ ವಿರುದ್ಧ ಇಲ್ಲಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕುಲ ರೋಡ್‌ನ ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖಾ ವ್ಯವಸ್ಥಾಪಕ ಅವಿನಾಶ ತಾಡಿ ಅವರು, ಹಾವೇರಿಯ ನಾಗವೇಣಿ ಟಿ.ಆರ್., ಅವಿನಾಶ ಗಿಡ್ಡಣ್ಣವರ, ಶಿವಲಿಂಗಪ್ಪ ಗುಮತಿ, ಸುನಿಲ ಬೋಳನವರ, ಬಸವರಾಜಪ್ಪ ಗಿಡ್ಡಣ್ಣವರ ಹಾಗೂ ಅಡಿಕೆ ಉಗ್ರಾಣದ ಮಾಲಕಿ ಭಾಗ್ಯಮ್ಮ ಚಳಗೇರಿ ವಿರುದ್ಧ ದೂರು ನೀಡಿದ್ದಾರೆ.
ಇವರೆಲ್ಲರೂ ತಮ್ಮ ಬಳಿ 1,800 ಚೀಲಗಳಲ್ಲಿ 1,450 ಕ್ವಿಂಟಲ್ ಅಡಿಕೆ ದಾಸ್ತಾನು ಇರುವುದಾಗಿ ಬ್ಯಾಂಕ್‌ಗೆ ತೋರಿಸಿದ್ದಾರೆ. ದಾಸ್ತಾನಿನ ರಸೀದಿಗಳನ್ನು ಬ್ಯಾಂಕ್‌ಗೆ ಹಾಜರುಪಡಿಸಿ, 2024ರ ಆಗಸ್ಟ್ 1ರಿಂದ 8ರವರೆಗೆ ತಲಾ 70 ಲಕ್ಷರೂ.ನಂತೆ, 3.50 ಕೋಟಿ ರೂ. ಸಾಲ ಪಡೆದಿದ್ದಾರೆ. ಭಾಗ್ಯಮ್ಮ ಚಳಗೇರಿ ಅವರ ಹಿರೇಕೆರೂರು ಉಗ್ರಾಣದಲ್ಲಿಯೇ ಅಡಿಕೆ ದಾಸ್ತಾನು ಇರುವುದಾಗಿ ತೋರಿಸಲಾಗಿತ್ತು. ಉಳಿದ ಐದು ಜನರ ಸಾಲಕ್ಕೆ ಭಾಗ್ಯಮ್ಮ ಜಾಮೀನುದಾರರಾಗಿ ಸಹಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಲ ಪಡೆದ ಬಳಿಕ ಹಣ ಮರುಪಾವತಿಸದೆ, ಬ್ಯಾಂಕ್‌ಗೆ ಅಡಿಕೆ ದಾಸ್ತಾನನ್ನೂ ಒಪ್ಪಿಸದೆ ವಂಚಿಸಿದ್ದರು. ಸಾಲದ ಭದ್ರತೆಯಾಗಿ ತೋರಿಸಿದ್ದ ಅಡಿಕೆ ದಾಸ್ತಾನನ್ನು ಪರಿಶೀಲಿಸಲು ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಗ್ರಾಣಕ್ಕೆ ತೆರಳಿದಾಗ, ಸಾಲ ಪಡೆದವರು ಬೆದರಿಕೆ ಹಾಕಿದ್ದಾರೆ. ಬ್ಯಾಂಕ್‌ಗೆ ತೋರಿಸಲಾಗಿದ್ದ ಅಡಿಕೆ ಚೀಲಗಳನ್ನು ಬೇರೆಡೆ ಸಾಗಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net