aravinda bellada 5ಕೆ ರನ್‌ಗೆ ಚಾಲನೆ

aravinda bellada ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಹುಬ್ಬಳ್ಳಿಯ ತೋಳನಕೆರೆ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ 5ಕೆ ರನ್‌ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಅರವಿಂದ ಬೆಲ್ಲದ ಚಾಲನೆ ನೀಡಿದರು.
aravinda bellada ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಹುಬ್ಬಳ್ಳಿಯ ತೋಳನಕೆರೆ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ 5ಕೆ ರನ್‌ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಅರವಿಂದ ಬೆಲ್ಲದ ಚಾಲನೆ ನೀಡಿದರು.
Published on
ಹುಬ್ಬಳ್ಳಿ: ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಡಿಪ್ಲೊಮಾ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಹು-ಧಾ ವತಿಯಿಂದ aravinda bellada ನಗರದ ತೋಳನಕೆರೆ ವೃತ್ತದಲ್ಲಿ ಮಂಗಳವಾರ 5ಕೆ ರನ್‌ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಅರವಿಂದ ಬೆಲ್ಲದ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
‘ಎಂವಿ ಬಿಲ್ಡ್‌ಮ್ಯಾಟ್-26’ ಇಂದಿನಿಂದ ಸೆ. 17ರವರೆಗೆ ನಡೆಯಲಿದ್ದು, ಈ ವೇಳೆ ಉತ್ಪನ್ನ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.
ಆರ್ಕಿಟೆಕ್ಟ್, ಇಂನಿಯರ್, ಬಿಲ್ಡರ್, ಗುತ್ತಿಗೆದಾರರು, ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು, ಸಾರ್ವಜನಿಕರು, ಕಟ್ಟಡ ಸಾಮಗ್ರಿ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಲಾಯಿತು. ನಂತರ ಉಚಿತ ಆರೋಗ್ಯ ಶಿಬಿರ, ನೇತ್ರ ತಪಾಸಣೆ, ನಾಡಿ ಪರೀಕ್ಷೆ (ಆಯುರ್ವೇದ), ಕ್ಯಾನ್ಸರ್ ತಪಾಸಣೆ ನಡೆಯಿತು.
ರಾಷ್ಟ್ರೀಯ ಈಜುಪಟು ಇಸ್ಮಾಯಿಲ್ ಹೊಸಮನಿ, ಹುಬ್ಬಳ್ಳಿಯ ಜೈಲರ್ ಮಮಿತಾಬಾಯಿ ಕದ್ರೆ, ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ ಲೋಕಾಪುರ, ನಿರ್ದೇಶಕ ಅಮೃತ ಮೆಹರವಾಡೆ, ಉಪಾಧ್ಯಕ್ಷ ವಿಜಯ ಶಿರಗುಪ್ಪಿ, ಕಾರ್ಯದರ್ಶಿ ಎಂ.ಸಿ. ನದಾಫ್, ಪ್ರಮುಖರಾದ ಸಂತೋಷ ಬುಲಬುಲೆ, ಗುರುರಾಜ ಹಾಲಿಗೇರಿ, ಅಂಬಾಸಾ ಚವ್ಹಾಣ, ಅಜಿತ ಪಾಟೀಲ, ರಾಜನ್ ಅಣ್ವೇಕರ, ಸತೀಶ ಅಣ್ವೇಕರ, ಪ್ರಕಾಶ ರತನ, ರಾಜೇಶ್ವರಿ ಪೈ, ಜಯಶ್ರೀ ಗರಗದ, ಇತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net