(aravind bellad) ನವೆಂಬರ್ ಅಂತಲ್ಲ ಒಟ್ಟಾರೆ ಕ್ರಾಂತಿ ಖಚಿತ
ಅರವಿಂದ ಬೆಲ್ಲದ
Published on:
Copied
Follow Us
ಹುಬ್ಬಳ್ಳಿ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವ ಪ್ರಯತ್ನ ಅವರ ಪಕ್ಷದ ಮುಖಂಡರೇ ನಿರಂತರವಾಗಿ ಮಾಡುತ್ತಿದ್ದಾರೆ. ನವೆಂಬರ್ ಕ್ರಾಂತಿ ಅಂತಲ್ಲ, ಒಟ್ಟಾರೆಯಾಗಿ ಕ್ರಾಂತಿ ಆಗಿಯೇ ಆಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಭವಿಷ್ಯ ನುಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಅಧಿಕಾರದಾಸೆಗಾಗಿ ಈ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಅವರ ಏಕಮೇವ ಉದ್ದೇಶವೆಂದರೆ ಭ್ರಷ್ಟಾಚಾರ ಮಾಡುವುದು. ಇನ್ನೂ ಎರಡು ವರ್ಷ ಸಂಕಷ್ಟ ಎದುರಿಸಲೇಬೇಕಾದ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ಬಿಹಾರ ಚುನಾವಣೆ ಕುರಿತ ಅವರ ಹೇಳಿಕೆಗೆ ಮಹತ್ವ ಕೊಡುವುದಿಲ್ಲ. ರಾಹುಲ್ ಗಾಂಧಿ ಅವರಲ್ಲಿ ನಿಜವಾದ ವಿಷಯಗಳು ಇಲ್ಲ. ಅವರು ಜನರ ಸಮೀಪವೇ ಹೋಗುವುದಿಲ್ಲ. ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಹೇಳಿಕೊಟ್ಟ ವಿಷಯದಂತೆ ಅವರು ಮಾತನಾಡುತ್ತಾರೆ. ಹಿಟ್ ಆ್ಯಂಡ್ ರನ್ ಮಾಡಿ ಹೋಗುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಅಧಿವೇಶನದಲ್ಲಿ ಧ್ವನಿ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದಲ್ಲಿ ಆಗಿರುವ ದೊಡ್ಡ ಪ್ರಮಾಣದ ಬೆಳೆ ಹಾನಿ ಕುರಿತು ಪ್ರಸ್ತಾಪ ಮಾಡಲಾಗುವುದು. ಖರೀದಿ ಕೇಂದ್ರಗಳು ಶುರುವಾಗಿಲ್ಲ ಎಂದು ದೂರಿದರು.
ಎರಡೂವರೆ ವರ್ಷದಲ್ಲಿ ಉದೋಗವಿಲ್ಲ, ಅಭಿವೃದ್ಧಿಯೂ ಶೂನ್ಯವಾಗಿದೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಎಫ್‌ಎಂಜಿಸಿ ಕ್ಲಸ್ಟರ್‌ಗೆ ಅನುಮತಿಸಲಾಗಿತ್ತು. ಆದರೆ, ಈ ಸರ್ಕಾರ ಇನ್ನೂ ಚಾಲನೆ ನೀಡಿಲ್ಲ. ಸೆಮಿಕಂಡಕ್ಟರ್ ಹಬ್, ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ಉತ್ತರ ಕರ್ನಾಟಕಕ್ಕೆ ತಂದಿಲ್ಲ ಎಂದರು.
ಕೃಷ್ಣ, ಭೀಮಾ, ತುಂಗಾಭದ್ರಾ ಸೇರಿ ಇತರ ನದಿ ವ್ಯಾಪ್ತಿಯ ನೀರಾವರಿ ಮತ್ತು ಅನುದಾನ ಹಂಚಿಕೆ ಕುರಿತು ಧ್ವನಿ ಎತ್ತುತ್ತೇವೆ ಎಂದರು.