ಅರಸು ಅವರ ಕೊಡುಗೆ ಅಜರಾಮರ

ಡಿ.ದೇವರಾಜ ಅರಸು ಜಯಂತಿ ಆಚರಣೆ
ಡಿ.ದೇವರಾಜ ಅರಸು ಜಯಂತಿ ಆಚರಣೆ
Published on
ಧಾರವಾಡ: ದೇವರಾಜ ಅರಸು ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾಜದ ಎಲ್ಲ ವರ್ಗದ ಜನರು ಶಿಣ ಪಡೆಯಲು ಅವಕಾಶ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಜಿಲ್ಲಾಧಿಕಾರಿ ಸ್ನೇಹಲ್​ ಆರ್​. ಹೇಳಿದರು.
ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ 111ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಶಿಣ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಹಾಸ್ಟೆಲ್​ಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅವರ ಅವಧಿಯಲ್ಲಿ ಕಲ್ಪಿಸಲಾದ ಉತ್ತಮ ಶೈಣಿಕ ಅವಕಾಶಗಳ ಲವಾಗಿ ಇಂದಿಗೂ ಅನೇಕ ವಿದ್ಯಾಥಿರ್ಗಳು ಶಿಣ ಪಡೆಯಲು ಸಾಧ್ಯವಾಗುತ್ತಿದೆ. ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಣಿಕ ಪ್ರಗತಿಗಾಗಿ ಡಿ. ದೇವರಾಜ ಅರಸು ಅವರು ಸಾಕಷ್ಟು ಶ್ರಮಿಸಿದ್ದರು ಎಂದರು.
ರೈತರ ಹಿತದೃಷ್ಟಿಯಿಂದ "ಉಳುವವನಿಗೆ ಭೂಮಿ' ಎಂಬ ಮಹತ್ವದ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಆಥಿರ್ಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಭದ್ರತೆಯ ಬುನಾದಿ ಕಲ್ಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್​ ಸೇರಿ ನಾಡಿನ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಹಿರಿಯ ನಾಯಕರ ಕುರಿತು ಇರುವ ಪುಸ್ತಕಗಳನ್ನು ಯುವಕರು ಓದಬೇಕು. ನಾಡಿಗೆ ಸೇವೆ ಸಲ್ಲಿಸಿದ ಎಲ್ಲ ಹಿರಿಯರನ್ನು ಸ್ಮರಿಸುವುದರ ಜತೆಗೆ ಅವರ ಆದರ್ಶಗಳನ್ನು ಅನುಸರಿಸಬೇಕು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮಾತನಾಡಿ, ಡಿ. ದೇವರಾಜ ಅರಸು ಅವರು ಮಾನವ ಜನಾಂಗಕ್ಕೆ ಬಹುದೊಡ್ಡ ಹಾಗೂ ಮಹತ್ತರ ಕೊಡುಗೆ ನೀಡಿದ ಧೀಮಂತ ರಾಜಕಾರಣಿ. ಅವರ ದೂರದೃಷ್ಟಿ ಲವಾಗಿ ಇಂದು ಅನೇಕ ವಿದ್ಯಾಥಿರ್ಗಳು ಹಾಸ್ಟೆಲ್​ ಸೌಲಭ್ಯ ಪಡೆದು ಶಿಣ ಪಡೆಯುತ್ತಿದ್ದಾರೆ ಎಂದು ಸ್ಮರಿಸಿದರು.
ಜಿಪಂ ಉಪಕಾರ್ಯದಶಿರ್ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ಹಿರಿಯ ವಕೀಲ ಪ್ರಕಾಶ ಉಡಿಕೇರಿ ಡಿ.ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸದ್ಭಾವನಾ ಪ್ರತಿಜ್ಞಾವಿಧಿ ಬೋಧಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊಬೇಷನರಿ ಐಎಎಸ್​ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಪ್ರೊ. ಶಶಿಧರ ತೋಡಕರ, ಶಿವಾನಂದ ಪಾಚಂಗಿ, ಪರಶುರಾಮ ಚುರಮರಿ, ಪ್ರಕಾಶ ಹಳಿಯಾಳ, ಗುರುನಾಥ ಹುಲಗೂರ, ಆನಂದ ಸಿಂಗನಾಥ, ಈರಣ್ಣ ಚಿಕ್ಕಬೆಳ್ಳಿಗಟ್ಟಿ ಇತರರಿದ್ದರು. ರವಿ ಕುಲಕಣಿರ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net