bhajan ಭಜನೆಯಿಂದ ಪರಮಾತ್ಮನ ಓಲೈಕೆ

bhajan  ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
bhajan ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶೆ ಬಿ.ಎಸ್. ಭಾರತಿ ಹೇಳಿಕೆ.
  • ಶ್ರೀ ಸಿದ್ಧಾರೂಢ ಮಠದಲ್ಲಿ ಸ್ಪರ್ಧೆ ಸಮಾರೋಪ.
ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಭಜನಾ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀ ಸಿದ್ಧಾರೂಢ ಮಠದ ಭಕ್ತರ ಮೇಲ್ಮನೆ ಸಭಾ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಮೊದಲು ಹಳ್ಳಿಗಳಲ್ಲಿ ನಡೆಯುವ ಉತ್ಸವ, ಹಬ್ಬ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಜನೆ ಮಾಡುವುದು ಸಂಪ್ರದಾಯವಾಗಿತ್ತು.
ಆದರೆ, ಇಂದಿನ ದಿನಗಳಲ್ಲಿ ಆ ಸಂಪ್ರದಾಯವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಅನುಗ್ರಹದಿಂದ ಟ್ರಸ್ಟ್ ಕಮಿಟಿಯವರು ಭಜನಾ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಅಣ್ಣಿಗೇರಿ ದಾಸೋಹ ಮಠದ ಸದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿದರು.
ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಅಧ್ಯಕ್ಷ ಶಾಮಾನಂದ ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪರ್ಧೆಯಲ್ಲಿ 25 ಜಿಲ್ಲೆಗಳ 200ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಗೋಕಾಕನ ಶ್ರೀ ಆತ್ಮಾನಂದ ಸ್ವಾಮೀಜಿ, ಶ್ರೀ ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ, ವೈಸ್ ಚೇರ್ಮನ್ ಗೀತಾ ಕಲಬುರ್ಗಿ, ಗೌರವ ಕಾರ್ಯದರ್ಶಿ ವಿನಾಯಕ ಘೊಡಕೆ, ಧರ್ಮದರ್ಶಿಗಳಾದ ಚನ್ನವೀರ ಮುಂಗುರವಾಡಿ, ಈರಣ್ಣ ತುಪ್ಪದ ಹಾಗೂ ಇತರರಿದ್ದರು.
ಭಜನಾ ಸ್ಪರ್ಧೆಯ ವಿಜೇತ ತಂಡಗಳು : ಪ್ರಥಮ ಬಹುಮಾನವನ್ನು ಗೋಕಾಕ ತಾಲೂಕು ಶಿವಪೂರದ ಶ್ರೀ ನಿರುಪಾಧೀಶ್ವರ ಭಜನಾ ಮಂಡಳಿ, ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಶ್ರೀ ಮರಿಯಮ್ಮ ಕರಿಯಮ್ಮ ಭಜನಾ ಮಂಡಳಿ, ಗೋಕಾಕನ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ರಾಯಬಾಗ ತಾಲೂಕು ಹಿಡಕಲ್ಲನ ಶ್ರೀ ಸಂಗಮೇಶ್ವರ ಭಜನಾ ಮಂಡಳಿ (ಬಾಲಕಿಯರು) ಪಡೆದುಕೊಂಡಿವೆ.
ಮಹಿಳಾ ಪುರಸ್ಕಾರವನ್ನು ಶಿರಸಿ ತಾಲೂಕು ಕಳವೆ ಗ್ರಾಮದ ಶ್ರೀ ಕನಕಾಂಬ ಭಜನಾ ಮಂಡಳಿ ತನ್ನದಾಗಿಸಿಕೊಂಡಿದೆ.
ಬಾಲಕಿಯರ-ಬಾಲಕರ ಪುರಸ್ಕಾರವನ್ನು ಹುಬ್ಬಳ್ಳಿ ವಿದ್ಯಾನಗರದ ಶ್ರೀ ಸದ್ಗುರು ಸಂಗೀತ ವಿದ್ಯಾಲಯ ಹಾಗೂ ಗೋಕಾಕನ ಶ್ರೀ ಸಿದ್ಧಾರೂಢ ಮಹಿಳಾ ಭಜನಾ ತಂಡ ಪಡೆದುಕೊಂಡಿವೆ.
ಉತ್ತಮ ಗಾಯಕ-ಗಾಯಕಿ ಪುರಸ್ಕಾರವನ್ನು ಬೂದಿಹಾಳದ ಶ್ರೀ ಸಿದ್ದರಾಮೇಶ್ವರ ಭಜನಾ ಮಂಡಳಿಯ ದಾದಾಸಾಬ್ ಸೈಯದ್ ಅಲಿ ಹಾಗೂ ಜಮಖಂಡಿ ತಾಲೂಕು ಕೊಣ್ಣೂರಿನ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಬಾಯವ್ವ ಹಡಪದ ಪಡೆದುಕೊಂಡಿದ್ದಾರೆ.
ಉತ್ತಮ ಹಾಮೋನಿಯಂ ಪುರಸ್ಕಾರವನ್ನು ಜಮಖಂಡಿ ತಾಲೂಕು ಚಿಕ್ಕಲಕಿ ಗ್ರಾಮದ ಶ್ರೀ ರಾಮಾವಧೂತ ಭಜನಾ ಮಂಡಳಿಯ ಗೋವಿಂದ ಗೋವಿ ಮಾಸ್ತರ ಹಾಗೂ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮದ ಶ್ರೀ ಚನ್ನಬಸವೇಶ್ವರ ಭಜನಾ ಮಂಡಳಿಯ ಶೇಖರಯ್ಯ ಕುಂದರಗಿಮಠ ತಮ್ಮದಾಗಿಸಿಕೊಂಡಿದ್ದಾರೆ.
ಮುಧೋಳ ತಾಲೂಕು ರಂಜಣಗಿಯ ಶ್ರೀ ಬಸವೇಶ್ವರ ಭಜನಾ ಮಂಡಳಿಯ ಚೌಕಪ್ಪ ಹಾದಿಮನಿ ಹಾಗೂ ಜಮಖಂಡಿ ತಾಲೂಕು ಲಿಂಗಸೂರನ ಶ್ರೀ ಶಿವಪುತ್ರ ಅವಧೂತ ಭಜನಾ ಮಂಡಳಿಯ ಕರಿಯಪ್ಪ ಗಣಿ ಅವರು ಉತ್ತಮ ತಬಲಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಉತ್ತಮ ದಮಡಿ ಪುರಸ್ಕಾರವನ್ನು ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಶ್ರೀ ಸಂಗಮೇಶ್ವರ ಭಜನಾ ಮಂಡಳಿ ಪಡೆದುಕೊಂಡಿದ್ದಾರೆ.
ಬಾಗಲಕೋಟೆ ತಾಲೂಕು ಭೈರಮಟ್ಟಿಯ ಶ್ರೀ ಬಸವೇಶ್ವರ ಭಜನಾ ಮಂಡಳಿಯ ರಂಗಪ್ಪ ಹುನಕುಂಟಿ ಪಡೆದುಕೊಂಡಿದ್ದಾರೆ.
ರಾಯಬಾಗ ತಾಲೂಕು ಹಾರೂಗೇರಿಯ ಶ್ರೀ ಚನ್ನವೃಷಭೇಂದ್ರ ಭಜನಾ ಮಂಡಳಿಯ ಮುತ್ತಪ್ಪ ಯಂಕಂಚಿ ಹಾಗೂ ಜಮಖಂಡಿ ತಾಲೂಕು ಬಿದರಿ ಗ್ರಾಮದ ಶ್ರೀ ಕುಮಾರೇಶ್ವರ ಭಜನಾ ಮಂಡಳಿಯ ಕರಿಯಪ್ಪ ಮೇಲಿಮನಿ ಅವರು ಉತ್ತಮ ತಾಳ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.
ಕಲಘಟಗಿ ತಾಲೂಕು ಕುರವಿನಕೊಪ್ಪದ ಶ್ರೀ ಸಿದ್ಧಾರೂಢ ಭಜನಾ ಮಂಡಳಿಯ ಗದಿಗೆಪ್ಪ ಹುಬ್ಬಳ್ಳಿ ಪಡೆದುಕೊಂಡಿದ್ದಾರೆ.
ತಿಪಟೂರ ತಾಲೂಕು ಹರಗುಪ್ಪೆ ಗ್ರಾಮದ ಶ್ರೀ ದುರ್ಗಾಂಬ ಭಜನಾ ಮಂಡಳಿ ಉತ್ತಮ ಡಗ್ಗಾ ಪುರಸ್ಕಾರ ಪಡೆದುಕೊಂಡಿವೆ.
ತಲಾ ಐದು ತಂಡಗಳು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿವೆ. 13 ತಂಡಗಳು ಸಮಾಧಾನಕರ ಪ್ರಶಸ್ತಿಗೆ ತೃಪ್ತಿ ಪಟ್ಟವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net