ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಪಿಂಚಣಿದಾರರ ವೇದಿಕೆಯ ವಾರ್ಷಿಕ ಮಹಾಸಭೆ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಪಿಂಚಣಿದಾರರ ವೇದಿಕೆಯ ವಾರ್ಷಿಕ ಮಹಾಸಭೆ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಪಿಂಚಣಿದಾರರ ವೇದಿಕೆಯ ವಾರ್ಷಿಕ ಮಹಾಸಭೆ
Published on
ಧಾರವಾಡ: ಆಧುನಿಕತೆಯ ಭರದಲ್ಲಿ ವಿಶ್ವಕ್ಕೇ ಮಾದರಿಯಾಗಿರುವ ಭಾರತದ ಸಂಸತಿಯನ್ನು ಮರೆಯಬಾರದು. ಸಮಾಜ ಸೇವೆಯು ಭಾರತೀಯ ಸಂಸತಿಯ ಅವಿಭಾಜ್ಯ ಅಂಗವಾಗಿದೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ನಿವೃತ್ತರು ಹಾಗೂ ಪಿಂಚಣಿದಾರರ ವೇದಿಕೆಯ 5ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಿವತ್ತರು ಸದಾ ಚಟುವಟಿಕೆಯಿಂದ ಇರಲು ತಮ್ಮ ಉಳಿದ ಬದುಕನ್ನು ಸಮಾಜದ ಒಳಿತಿಗೆ ಮೀಸಲಿಡಬೇಕು ಎಂದರು.
ಆಂಧ್ರಪ್ರದೇಶದ ಕೇಂದ್ರ ಗಿರಿಜನ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ಮಾತನಾಡಿ, ನಿವತ್ತರು ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ನಿವೃತ್ತ ನ್ಯಾಯಾಧೀಶ ಎಸ್​.ಎಚ್​. ಮಿಠ್ಠಲಕೋಡ ಮಾತನಾಡಿ, ನೆತಿಕ ಹಾಗೂ ಪ್ರಾಮಾಣಿಕ ಸಮಾಜ ನಿರ್ಮಾಣದಲ್ಲಿ ಹಿರಿಯ ನಾಗರಿಕರು ನಿರ್ಣಾಯಕ ಪಾತ್ರ ವಹಿಸಬೇಕು ಎಂದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ನಿವತ್ತರ ವೇದಿಕೆ ಅಧ್ಯ ಬಿ.ಪಿ. ಪಟ್ಟಣಶೆಟ್ಟಿ ಮಾತನಾಡಿದರು.
ಪ್ರಧಾನ ಕಾರ್ಯದಶಿರ್ ಎ.ಜಿ. ಸೂರ್ಯವಂಶಿ, ಉಪಾಧ್ಯ ಎ.ಎನ್​. ಜ್ಯೋತೇಪ್ಪನವರ, ಎಸ್​.ಜಿ. ಸೋಮಣ್ಣನವರ್​, ಕೆ. ಚಂದ್ರಕಾಂತ, ಆರ್​.ಬಿ. ಹಂಚಿನಮನಿ, ವಿಶ್ರಾಂತ ಎಜಿಎಂ ಉಲ್ಲಾಸ ಗುನಗಾ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net