annual day ಶಾರದಾದೇವಿ ಮಂದಿರದ ವಾರ್ಷಿಕೋತ್ಸವ

annual day ಮಾತಾಜಿ ತೋಜೋಮಯಿ ಮಾತನಾಡಿದರು.
annual day ಮಾತಾಜಿ ತೋಜೋಮಯಿ ಮಾತನಾಡಿದರು.
Published on
ಹುಬ್ಬಳ್ಳಿ: annual day ಇಲ್ಲಿಯ ಡಾಲರ್ಸ​ ಕಾಲನಿಯ ಶ್ರೀಮಾತಾ ಆಶ್ರಮದಲ್ಲಿ ಮಾತೆ ಶಾರದಾದೇವಿ ವಿಶ್ವಭಾವೈಕ್ಯ ಮಂದಿರದ 13ನೇ ವಾರ್ಷಿಕೋತ್ಸವ ಅಂಗವಾಗಿ ಜ. 24ರಿಂದ ಎರಡು ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾತಾಜಿ ತೋಜೋಮಯಿ ತಿಳಿಸಿದರು.
ನಗರದ ಆಶ್ರಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕೋತ್ಸವ ಹಾಗೂ ಲೋಕ ಕಲ್ಯಾಣಾರ್ಥವಾಗಿ ಜ. 24ರಂದು ಬೆಳಗ್ಗೆ 8:30ಕ್ಕೆ ನವಚಂಡಿ ಹೋಮ ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಅವರು ಸಾನ್ನಿಧ್ಯ ವಹಿಸುವರು. ಸ್ವಾಮಿ ತೇಜಸಾನಂದಜಿ ಮಹಾರಾಜರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ರಾಮಕೃಷ್ಣ ವಿವೇಕಾನಂದ ಆಶ್ರಮದವರಿಂದ ಹಾಗೂ ಶಾರದಾ ಗುರುಕುಲದ ಮಕ್ಕಳಿಂದ ಭಜನೆ ನೆರವೇರಲಿದ್ದು, ಸಂಜೆ ಸದ್ಯೋಜಾತ ಕಲಾಕೇಂದ್ರದ ವತಿಯಿಂದ ಲವ-ಕುಶ ಪ್ರಸಂಗದ ಯಕ್ಷಗಾನ ಜರುಗುವುದು ಎಂದರು.
ಜ. 25ರಂದು ಬೆಳಗ್ಗೆ 9:30ಕ್ಕೆ ಆಶ್ರಮದ ಆವರಣದಲ್ಲಿ ಶ್ರೀ ಲಲಿತಾ ಸಹಸ್ರನಾಮದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ, ಭಜನಾ ಕಾರ್ಯಕ್ರಮಗಳು ನೆರವೇರಲಿವೆ.
ಮೇಯರ್​ ಜ್ಯೋತಿ ಪಾಟೀಲ, ಡಾ. ಹೇಮಾ ಕಲ್ಲೂರಯ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಷ್ಟೋತ್ಥಾನ ವಿದ್ಯಾಕೇಂದ್ರದ ಅನಿತಾ ರೈ ಅವರು ಮಹಾನೀರೆಯರ ಆದರ್ಶ ಕುರಿತು ಉಪನ್ಯಾಸ ನೀಡುವರು.
ಸಾಫಲ್ಯ ಪ್ರತಿಷ್ಠಾನದ ಮೃಣಾಲ ಜೋಶಿ ಅವರು, ಮಾತೆ ಶಾರದಾದೇವಿಯವರ ಮಾತೃ ಪ್ರೇಮ ವಿಷಯದ ಕುರಿತು ಹಾಗೂ ಮಾತಾ ಆಶ್ರಮದ ಆಧ್ಯಕ್ಷೆ ಮಾತಾಜಿ ತೇಜೋಮಯಿ ಅವರು ಆಧುನಿಕ ಸ್ತ್ರೀಯರಿಗೆ ಶಾರದಾದೇವಿಯವರ ಆದರ್ಶ ಕುರಿತು ಉಪನ್ಯಾಸ ನೀಡುವರು.
ಸಂಜೆ ಆರೂಢ ಗುರುಕುಲ ಪರಿವಾರದ ವತಿಯಿಂದ ಭಜನೆ, ಹೇಮಾ ವಾಘ್ಮೋಡೆ ಅವರ ನೇತೃತ್ವದಲ್ಲಿ ಮಯೂರ ನೃತ್ಯ ಆಕಾಡೆಮಿ ಮಕ್ಕಳಿಂದ ವಿಶೇಷ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net