annual day ವಿಮಲಾ ಕುಲಕರ್ಣಿ ಶಾಲೆಯಲ್ಲಿ ಸಂಸ್ಕೃತಿ ಹಬ್ಬ

annual day ಹುಬ್ಬಳ್ಳಿಯ ಭವಾನಿನಗರ ವಿಮಲಾ ಕುಲಕರ್ಣಿ ಮೆಮೊರಿಯಲ್​ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಂಸ್ಕೃತಿ ಹಬ್ಬದಲ್ಲಿ ಈರಣ್ಣ ನಾಗರಾಳ, ಕನಕವೀಡು ಸೇತುಮಾಧವರಾವ್​, ಕನಕಗಿರಿ ರಘೋತ್ತಮರಾವ್​, ಶ್ರೀರಂಗ ಹನುಮಸಾಗರ, ಕಿರಣ ಅಡವಿ, ಸುಕನ್ಯಾ ಇತರರು ಇದ್ದರು.

Published on
ಅತಿಥಿಗಳಾಗಿದ್ದ ಈರಣ್ಣ ನಾಗರಾಳ, ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಕನಕವೀಡು ಸೇತುಮಾಧವರಾವ್​, ಖಜಾಂಚಿ ಕನಕಗಿರಿ ರಘೋತ್ತಮರಾವ್​, ಸದಸ್ಯರಾದ ಶ್ರೀರಂಗ ಹನುಮಸಾಗರ, ಕಿರಣ ಅಡವಿ ಹಾಗೂ ಕರ್ನಾಟಕ ಬ್ಯಾಂಕ್​ ವ್ಯವಸ್ಥಾಪಕಿ ಸುಕನ್ಯಾಅವರು ಕಾರ್ಯಕ್ರಮ ಉದ್ಘಾಟಿಸಿದರು.
ಯು.ಕೆ.ಜಿ. ಯಿಂದ ಶ್ರೇಯಾ ಎಸ್​. ಉತ್ತಮ ವಿದ್ಯಾರ್ಥಿನಿ ಮತ್ತು ರಿಧಾನ್​ ಗೌಡರ್​ ಉತ್ತಮ ವಿದ್ಯಾರ್ಥಿ, ಪ್ರಾಥಮಿಕ ವಿಭಾಗದಿಂದ ಸನ್ನಿಧಿ ರಟ್ಟಿಹಳ್ಳಿ ಮತ್ತು ಮಂಥನ್​ ಗಂಟಿ ಉತ್ತಮ ವಿದ್ಯಾರ್ಥಿಗಳೆಂದು ಹೊರಹೊಮ್ಮಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಲಿವುಡ್​, ಬಾಲಿವುಡ್​, ಛೋಟಾ ಭೀಮ, ದಸರ, ಹನುಮಾನ್​ ಮುಂತಾದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ತಮ್ಮಅಮೋಘ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಂಡರು.
ಪ್ರಾಚಾರ್ಯ ಎಂ.ಕೆ. ಹಿರೇಮಠ ಮತ್ತು ಮುಖ್ಯೋಪಾಧ್ಯಾಯ ಅನಿತಾ ಬಾಗಲಕೋಟ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net