ಕಾಂಗ್ರೆಸ್ನಲ್ಲಿ ಗಾಂಧಿ ಕುಟುಂಬ ಹೊರತುಪಡಿಸಿ ಬೇರೆ ಯಾವುದೇ ನಾಯಕರಿಗೆ ಬೆಲೆ ಇಲ್ಲ ಎಂಬುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಕ್ಷಿ. ಮುಖ್ಯಮಂತ್ರಿ ಕುರ್ಚಿ ವಿವಾದ ಬಗೆಹರಿಸುವುದನ್ನು ಬಿಟ್ಟು, ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂಬ ಅವರ ಹೇಳಿಕೆ ಅಚ್ಚರಿ ಮೂಡಿಸುವಂತಿದೆ. ಎಐಸಿಸಿ ಅಧ್ಯಕ್ಷ ಹುದ್ದೆ ಹೈಕಮಾಂಡ್ ಸ್ಥಾನಕ್ಕೆ ಕಡಿಮೆ ಇಲ್ಲ ಎಂಬುದನ್ನು ಖರ್ಗೆ ಅವರು ಮರೆತಂತಿದೆ ಎಂದು ಹೇಳಿದರು.