amnesty schemes ಅಮ್ನೆಸ್ಟಿ ಯೋಜನೆ ನೋಂದಣಿ ಅಭಿಯಾನ

amnesty schemes ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಪಿಎಫ್ ಅಧಿಕಾರಿಗಳಾದ ಜಯಕುಮಾರ್​, ಅಶುತೋಷ್​.
amnesty schemes ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಪಿಎಫ್ ಅಧಿಕಾರಿಗಳಾದ ಜಯಕುಮಾರ್​, ಅಶುತೋಷ್​.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಫ್ ಕಚೇರಿಯಲ್ಲಿ ಜಾಗೃತಿ ಸಮ್ಮೇಳನ
  • ಯೋಜನೆಯ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವುದು

ಹುಬ್ಬಳ್ಳಿ: amnesty schemes ಇಲ್ಲಿಯ ನವನಗರದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಪ್ರಾದೇಶಿಕ ಕಚೇರಿಯಲ್ಲಿ ಉದ್ಯೋಗದಾತರು, ಕೈಗಾರಿಕೆಗಳು, ವಾಣಿಜ್ಯ ಮಂಡಳಿಗಳು, ಕಾರ್ಮಿಕ ಸಲಹೆಗಾರರು ಮತ್ತು ಎಚ್​ಆರ್​ ವೃತ್ತಿಪರರಿಗೆ ಜಾಗೃತಿ ಸಮ್ಮೇಳನ ಶುಕ್ರವಾರ ನಡೆಯಿತು.

ಇಪಿಎಫ್ಒ

ಅಧ್ಯಕ್ಷತೆ ವಹಿಸಿದ್ದ ಗೋವಾ- ಕರ್ನಾಟಕ ವಲಯದ ಕೇಂದ್ರ ಭವಿಷ್ಯ ನಿಧಿ ಹೆಚ್ಚುವರಿ ಆಯುಕ್ತ ಜಯಕುಮಾರ್​, ಯೋಜನೆಯ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವುದು, ಅರ್ಹ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ವಿಸ್ತರಿಸುವುದು.

ಉದ್ಯೋಗದಾತರು ನಿಗದಿತ ಅವಧಿಯೊಳಗೆ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಹುಬ್ಬಳ್ಳಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಅಶುತೋಷ್​ ಮಾತನಾಡಿ, ಉದ್ಯೋಗ ಸಂಘಟನೆಗಳ ಪ್ರತಿನಿಧಿಗಳು ಯೋಜನೆಗಳ ಪ್ರಯೋಜನಗಳನ್ನು ತಮ್ಮ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳಿಗೆ ತಲುಪಿಸುವಂತೆ ಮನವಿ ಮಾಡಿದರು.

ಸಂವಾದದಲ್ಲಿ ಕೆಸಿಸಿಐ ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ನಂದೀಶ ಎಸ್​.ಎ., ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಶಶಿಕುಮಾರ ಇತರರು ಭಾಗವಹಿಸಿದ್ದರು.

ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉದ್ಯೋಗದಾತರು, ಎಚ್​ಆರ್​ ವೃತ್ತಿಪರರು, ಕೈಗಾರಿಕೆಗಳು, ವಾಣಿಜ್ಯ ಮಂಡಳಿ ಮತ್ತು ಕಾರ್ಮಿಕ ಸಲಹೆಗಾರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net