amgl temple ದೇವರ ಪೂಜೆಯಲ್ಲಿ ನೆಮ್ಮದಿ ಕಾಣುವ ಭಕ್ತರು

amgl temple ಹುಬ್ಬಳ್ಳಿಯ ಅಮರಗೋಳದಲ್ಲಿ ಶ್ರೀ ದುಂಡಿ ಬಸವೇಶ್ವರ ಹಾಗೂ ಬಳವಲಿಕೆಮ್ಮ ದೇವಸ್ಥಾನಗಳ ಉದ್ಘಾಟನೆ ಸಮಾರಂಭದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಜ್ಜಪ್ಪ ಹೊರಕೇರಿ, ಕಲ್ಲನಗೌಡ ಪಾಟೀಲ, ಷಣ್ಮುಖ ಬೆಟಗೇರಿ, ಬಸವರಾಜ ಕಿತ್ತೂರ, ರಫಿಕ ದರ್ಗಾದ, ಮಂಜುನಾಥ ಲದ್ದಿ, ಎಸ್​.ಎಫ್. ಹೆಬಸೂರ ಇತರರು ಇದ್ದರು.
amgl temple ಹುಬ್ಬಳ್ಳಿಯ ಅಮರಗೋಳದಲ್ಲಿ ಶ್ರೀ ದುಂಡಿ ಬಸವೇಶ್ವರ ಹಾಗೂ ಬಳವಲಿಕೆಮ್ಮ ದೇವಸ್ಥಾನಗಳ ಉದ್ಘಾಟನೆ ಸಮಾರಂಭದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಜ್ಜಪ್ಪ ಹೊರಕೇರಿ, ಕಲ್ಲನಗೌಡ ಪಾಟೀಲ, ಷಣ್ಮುಖ ಬೆಟಗೇರಿ, ಬಸವರಾಜ ಕಿತ್ತೂರ, ರಫಿಕ ದರ್ಗಾದ, ಮಂಜುನಾಥ ಲದ್ದಿ, ಎಸ್​.ಎಫ್. ಹೆಬಸೂರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಯಾನಗರ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರವಚನ
  • ಅಮರಗೋಳದಲ್ಲಿ ದೇವಸ್ಥಾನಗಳ ಉದ್ಘಾಟನೆ

ಹುಬ್ಬಳ್ಳಿ: amgl temple ತಾಲೂಕಿನ ಅಮರಗೋಳ ಸ್ಟೇಶನ್​ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುಂಡಿ ಬಸವೇಶ್ವರ ಹಾಗೂ ಶ್ರೀ ಬಳವಲಿಕೆಮ್ಮದೇವಿ ದೇವಸ್ಥಾನಗಳ ಉದ್ಘಾಟನೆ ಹಾಗೂ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಶುಕ್ರವಾರ ಭಕ್ತಿ ಭಾವದಿಂದ ನಡೆಯಿತು.

ಸುಳ್ಳದ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ದರಾಮ ಶಿವಯೋಗಿ ಶಿವಾಚಾರ್ಯರು, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು. ಗ್ರಾಮದ ಹಿರಿಯರು, ಭಕ್ತ ಮಂಡಳಿ ಸದಸ್ಯರು, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡರು.
ನಂತರ ನಡೆದ ಧರ್ಮಸಭೆ ಹಾಗೂ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ನಯಾನಗರ ಸುಖದೇವಾನಂದ ಮಠದ ಅಭಿನವ ಶ್ರೀ ಸಿದ್ಧಲಿಂಗ ಸ್ವಾಮೀಜಿ, ದೇವರಿದ್ದಾನೆ ಎಂಬ ನಂಬಿಕೆಯಲ್ಲಿ ಭಾರತೀಯರು ದೇವರ ಪೂಜೆ ಮಾಡಿ ಮನಸ್ಸಿನ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಆ ಮೂಲಕ ಮೋಕ್ಷದತ್ತ ಸಾಗುತ್ತಾರೆ ಎಂದರು.
ಈ ಮೊದಲು ಮಣ್ಣು, ಕಲ್ಲು ಪೂಜೆ ಮಾಡುವ ನಮ್ಮ ದೇಶದ ಸಂಸತಿಯನ್ನು ಗೇಲಿ ಮಾಡುತ್ತಿದ್ದ ಪಾಶ್ಚಿಮಾತ್ಯರು ಈಗ ನಮ್ಮನ್ನೇ ಅನುಸರಿಸುತ್ತಿದ್ದಾರೆ. ದೇವರಿದ್ದಾನೆ ಎಂದು ನಂಬುತ್ತಿದ್ದಾರೆ. ದೇವರಿಗೆ ಒಂದು ರೂಪ ಕೊಟ್ಟು ಆತನ ಒಲುಮೆಗೆ ಪ್ರಾಥಿರ್ಸುವ ನಮ್ಮವರ ಪದ್ಧತಿಗಳನ್ನು ಅವರೂ ಪಾಲಿಸುತ್ತಿದ್ದಾರೆ. ಇದೇ ಭಾರತದ ಶಕ್ತಿ. ದೇವರ ಮೇಲಿನ ನಂಬಿಕೆ ಯಾವತ್ತೂ ಸುಳ್ಳಾಗುವುದಿಲ್ಲ ಎಂದರು.
ವಿಜ್ಞಾನಿಗಳು ಕೋಟ್ಯಂತರ ರೂ. ಖರ್ಚು ಮಾಡಿ ಅಧ್ಯಯನದೊಂದಿಗೆ ಗ್ರಹಣ, ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ, ನಮ್ಮವರು ಸಾವಿರಾರು ವರ್ಷಗಳಿಂದ ಕಾಲಜ್ಞಾನದ ಮೂಲಕ ಭವಿಷ್ಯ ಹೇಳುತ್ತ ಬಂದಿದ್ದಾರೆ ಎಂದರು.
ವೇದಮೂರ್ತಿ ಶ್ರೀ ಗದಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಎರಡೂ ದೇವಸ್ಥಾನಗಳ ಇತಿಹಾಸ ಸ್ಮರಿಸಿದರು.

ಫೌಂಡೇಷನ್

ಎಸ್​.ಎಫ್. ಹೆಬಸೂರ, ಸಂತೋಷ ಸೋಗಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net